ಬೆಂಗಳೂರು, ಆ 15 (DaijiworldNews/PY): "ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಂದು ಭಾರತ ಮಾತೆಗೆ ಗರ್ವದಿಂದ ಗೌರವ ಸಲ್ಲಿಸೋಣ" ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ನಮ್ಮಲ್ಲಿ ನಾನಾ ಜಾತಿ-ಧರ್ಮಗಳು, ವಿವಿಧ ಭಾಷೆಗಳು, ವಿಶಿಷ್ಟ ಜೀವನಶೈಲಿಗಳಂತಹ ಹಲವಾರು ವರ್ಗಗಳಿದ್ದರೂ, ನಮೆಲ್ಲರನ್ನು ಒಗ್ಗೂಡಿಸಲು ನಮ್ಮಲ್ಲಿರುವ ಭಾರತೀಯತೆಯ ಒಂದು ಅಂಶ ಸಾಕು" ಎಂದಿದ್ದಾರೆ.
"ಈ ಪುಣ್ಯದಿನದ ಹಿಂದಿರುವ ಅಸಂಖ್ಯಾತ ತ್ಯಾಗ ಮತ್ತು ಬಲಿದಾನಗಳನ್ನು ವಿಧೇಯತೆಯಿಂದ ಸ್ಮರಿಸುತ್ತಾ, ಬ್ರಿಟಿಷರ ನೂರಾರು ವರ್ಷಗಳ ಸರ್ವಾಧಿಕಾರದ ಸರಪಳಿಯನ್ನು ಕಿತ್ತೊದಗಿದ ಈ ಅಮೃತ ಮಹೋತ್ಸವದಂದು ಭಾರತ ಮಾತೆಗೆ ಗರ್ವದಿಂದ ಗೌರವ ಸಲ್ಲಿಸೋಣ. ಜೈ ಹಿಂದ್" ಎಂದು ಹೇಳಿದ್ದಾರೆ.