ಹೊನ್ನಾಳಿ,ಆ 15 (DaijiworldNews/HR): ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆಗೆ ವಾಜಪೇಯಿ ಹೆಸರು ಹೇಳುವ ಹಾಗೂ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅಪಟ್ಟ ದೇಶಪ್ರೇಮಿ ಹಾಗೂ ಚತುಷ್ಪಥ ರಸ್ತೆಯ ಹರಿಕಾರ ವಾಜಪೇಯಿ ಬಗ್ಗೆ ಮಾತನಾಡುವ ಮೊದಲು ನಮ್ಮ ನೈತಿಕತೆ ಬಗ್ಗೆ ಪ್ರಶ್ನೆ ಮಾಡಿಕೊಳ್ಳಬೇಕು. ಬಾಯಿಗೆ ಬಂದ ಹಾಗೆ ಮಾತನಾಡಿದರೆ ಮುಂಬರುವ ಚುನಾವಣೆಗಳಲ್ಲಿ ಕ್ಷೇತ್ರದ ಜನರು ಅವರಿಗೆ ತಕ್ಕಪಾಠ ಕಲಿಸುತ್ತಾರೆ" ಎಂದರು.
"ಪ್ರಿಯಾಂಕ್ ಖರ್ಗೆ ಅವರು ತಮ್ಮ ತಮ್ಮ ಹೇಳಿಕೆ ಬಗ್ಗೆ ರಾಜ್ಯದ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ಇನ್ನು ಮಾಜಿ ಸಚಿವರು ದೆಹಲಿಗೆ ಹೋದರೆ ಬೇಡ ಅನ್ನಲು ನಾವ್ಯಾರು? ಹೋಗೋರು ಹೋಗಲಿ. ಬರೋರು ಬರಲಿ. ಬೇಡ ಎನ್ನುವುದಿಲ್ಲ" ಎಂದು ಹೇಳಿದ್ದಾರೆ.