ಮುಂಬೈ, ಆ 15 (DaijiworldNews/PY): ಭಾರತದ ಬ್ಯಾಂಕ್ಗಳಿಂದ ಸಾಲ ಪಡೆದು ವಂಚಿಸಿ ಲಂಡನ್ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರ ಕಿಂಗ್ಫಿಷರ್ ಹೌಸ್ ಕಟ್ಟಡವನ್ನು ಹೈದರಾಬಾದ್ ಮೂಲದ ಸ್ಯಾಟರ್ನ್ ರಿಯಾಲ್ಟರ್ ಸಂಸ್ಥೆ 52.25 ಕೋಟಿ ರೂ. ಗೆ ಖರೀದಿ ಮಾಡಿದೆ.
150 ಕೋಟಿ ರೂ. ಬೆಲೆ ಬಾಳುವ ಮನೆಯನ್ನು ಸಾಲ ವಸೂಲಿ ನ್ಯಾಯಾಧೀಕರಣ ಮಾರಾಟ ಮಾಡಿದೆ. ಎಂಟು ಬಾರಿ ಹರಾಜು ಕರೆದರೂ ಕೂಡಾ ಉತ್ತಮ ಬೆಲೆ ಸಿಗದೇ ಇದ್ದ ಕಾರಣ ವಿಜಯ್ ಮಲ್ಯ ಅವರ ಕಿಂಗ್ಫಿಷರ್ ಹೌಸ್ ಕಟ್ಟಡವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ.
"ಕಿಂಗ್ಫಿಷರ್ ಹೌಸ್ ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದ ಸಮೀಪದಲ್ಲಿದೆ. ಕಿಂಗ್ಫಿಷರ್ ಏರ್ಲೈನ್ಸ್ನ ಪ್ರಧಾನ ಕಚೇರಿಯಾಗಿದ್ದ ಈ ಕಟ್ಟಡದ ಮಾರಾಟದಿಂದ ಬಂದ ಹಣವನ್ನು ವಿಜಯ್ ಮಲ್ಯ ಭಾರತದಲ್ಲಿ ಬಾಕಿ ಉಳಿಸಿರುವ ಸಾಲಕ್ಕೆ ಮುರಿದುಕೊಳ್ಳಲಾಗುತ್ತದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.