ಚಿಕ್ಕಮಗಳೂರು, ಆ.14 (DaijiworldNews/HR): ಸಾವರ್ಕರ್ ಯಾರೆಂದು ಕೇಳುವವರಿಗೆ ಯಾರಿಗೆ ತಂದೆ ಯಾರೆಂದು ಅನುಮಾನವಿರುತ್ತದೆ ಎಂದು ಪ್ರಿಯಾಂಕ್ ಖರ್ಗೆಗೆ ಸಿಟಿ ರವಿ ಟಾಂಗ್ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಿಟಿ ರವಿ, "ವೀರ್ ಸಾವರ್ಕರ್ ಬಗ್ಗೆ ಗೊತ್ತಿಲ್ಲದವರಿಗೆ ತಮ್ಮ ಹುಟ್ಟಿನ ಬಗ್ಗೆ ಕೂಡ ಸಂಶಯವಿರುತ್ತದೆ, ಎರಡು ಕರಿನೀರಿನ ಶಿಕ್ಷೆಗೆ ಒಳಗಾದವರು ವೀರ ಸಾವರ್ಕರ್. ಅವರ ಬಗ್ಗೆ ಗೊತ್ತಿಲ್ಲ ಎಂದರೆ ಹೇಗೆ..? ಎಂದು ಪ್ರಶ್ನಿಸಿದ್ದಾರೆ.
ಇನ್ನು "ನೆಹರೂ ವೈರುಧ್ಯಗಳನ್ನು ಮುಚ್ಚಿಕೊಳ್ಳಲು ಅಟಲ್ ಅವರ ಫೋಟೋಗಳನ್ನು ಬಳಸಿಕೊಳ್ಳುತ್ತಿದ್ದಾರೆ. ನೆಹರೂ ಅವರ ನೂರಾರು ಫೋಟೋಗಳು ಇಂದಿಗೂ ಸಾಮಾಜಿಕ ಜಾಲತಾಣದಲ್ಲಿದೆ, ಅಟಲ್ ಜೀ ಅವರದ್ದು ಆ ರೀತಿ ಒಂದು ತೋರಿಸಲಿ" ಎಂದು ಸವಾಲು ಹಾಕಿದ್ದಾರೆ.
ಶಾಸಕ ಪ್ರಿಯಾಂಕ ಖರ್ಗೆ ಇದಕ್ಕೂ ಮುನ್ನ ಹೇಳಿಕೆ ನೀಡಿದ್ದು, ''ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕುಡಿಯುತ್ತಿದ್ದರಂತೆ ಹಾಗಂತ ಎಲ್ಲಾ ಬಾರ್ ಗಳಿಗೂ ವಾಜಪೇಯಿ ಹೆಸರಡ್ತೀರಾ? ಎಂದು ಹೇಳಿದ್ದಾರೆ.