ಬಳ್ಳಾರಿ, ಆ 14 (DaijiworldNews/MS): ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಸದ್ಯ ಹೆಚ್ಚಳ ಇಲ್ಲ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದರು.
ಬಳ್ಳಾರಿಯಲ್ಲಿ ಈ ಕುರಿತು ಮಾತನಾಡಿದ ಸಚಿವರು , ಪೆಟ್ರೋಲ್ ಮತ್ತು ಡಿಸೇಲ್ ದರ ಹೆಚ್ಚಳವಾಗಿದ್ದರೂ, ಬಸ್ ಪ್ರಯಾಣ ದರವನ್ನು ಸದ್ಯ ಹೆಚ್ಚಳ ಮಾಡುವುದಿಲ್ಲ. ಸಾರಿಗೆ ನಿಗಮಗಳು ಇಲಾಖೆ ನಷ್ಟದಲ್ಲಿವೆ . ಆದರೆ ಬಸ್ ದರ ಹೆಚ್ಚಿಸಿದರೆ ಪ್ರಯಾಣಿಕರಿಗೆ ತೊಂದರೆಯಾಗಲಿದೆ ಎಂದು ಹೇಳಿದರು
ಸಂಸ್ಥೆಯನ್ನು ನಷ್ಟದಿಂದ ಹೊರ ತರಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು . ಸಾರಿಗೆ ಇಲಾಖೆಯ ನಾಲ್ಕು ನಿಗಮಗಳು ತೀವ್ರ ನಷ್ಟದಲ್ಲಿದ್ದು ಪ್ರಸಕ್ತ ಸಾಲಿನಲ್ಲಿ ₹ 510 ಕೋಟಿ ನಷ್ಟವಾಗಿದೆ. ಇನ್ನು ಕಳೆದ ವರ್ಷ ₹ 1280 ಕೋಟಿ ನಷ್ಟವಾಗಿದೆ. ಹೀಗಾಗಿ ಪೆಟ್ರೋಲ್ ಮತ್ತು ಡಿಸೇಲ್ ಬದಲಾಗಿ ಎಲೆಕ್ಟ್ರಿಕಲ್ ಬಸ್ಗಳನ್ನು ಓಡಿಸಲು ಯೋಜನೆ ರೂಪಿಸಲಾಗಿದ್ದು, ಟೆಂಡರ್ ಕೂಡ ಕರೆಯಲಾಗಿದೆ. ನಷ್ಟದಲ್ಲಿರುವ ನಿಗಮಗಳನ್ನು ಲಾಭದತ್ತ ಕೊಂಡೊಯ್ಯುವ ಕುರಿತು ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿದೆ. ಎಲೆಕ್ಟ್ರಿಕಲ್ ಬಸ್ ಗಳ ಯೋಜನೆಗಾಗಿ ಕೇಂದ್ರ ಸರ್ಕಾರ ಈ ಯೋಜನೆಗಾಗಿ ಪ್ರತ್ಯೇಕವಾಗಿ ಅನುದಾನ ನೀಡುವ ವಿಶ್ವಾಸವಿದೆ ಎಂದರು.
ಇದೇ ವೇಳೆ ಹಳೇ ಬಸ್ಗಳನ್ನು ಗುಜುರಿಗೆ ಬಿಸಾಡುವ ಕೇಂದ್ರ ಸರ್ಕಾರದ ನೀತಿ ಉತ್ತಮವಾಗಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.