ನವದೆಹಲಿ, ಆ 14 (DaijiworldNews/PY): ಬಿಜೆಪಿ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಪ್ರಧಾನಿ ಮೋದಿ ಅವರ ಆರ್ಥಿಕ ಹಾಗೂ ವಿದೇಶಿ ನೀತಿಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, "ಮೋದಿ ಭಾರತದ ರಾಜನಲ್ಲ" ಎಂದಿದ್ದಾರೆ.
ತಮ್ಮ ಆಯ್ಕೆಯ ಸಚಿವ ಸ್ಥಾನ ನೀಡದಿರುವುದು ನಿಮ್ಮ ಅಸಮಾಧಾನಕ್ಕೆ ಕಾರಣ ಎಂದು ವಾದಿಸಿದ ಟ್ವಿಟರ್ ಬಳಕೆದಾರರೋರ್ವರಿಗೆ ಉತ್ತರಿಸಿದ ಅವರು, "ಬೇರೆಯೇ ಕಾರಣಕ್ಕೆ ನಾನು ಮೋದಿ ವಿರೋಧಿ" ಎಂದು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, "ನಾನು ಆರ್ಥಿಕತೆ ಹಾಗೂ ವಿದೇಶಾಂಗ ನೀತಿಗಾಗಿ ಮೋದಿ ವಿರೋಧಿ. ಈ ಬಗ್ಗೆ ಯಾವುದೇ ಜವಾಬ್ದಾರಿಯುತವಾಗಿ ಚರ್ಚಿಸಲು ನಾನು ಸಿದ್ದ. ನೀವು ಪ್ರಜಾಪ್ರಭುತ್ವದ ಬಗ್ಗೆ ಕೇಳಿದ್ದೀರಾ?. ಮೋದಿ ಭಾರತದ ರಾಜನಲ್ಲ" ಎಂದಿದ್ಧಾರೆ.
ಭಾರತದ ವಿದೇಶಾಂಗ ನೀತಿಗಳ ಪರಿಣಾಮಕಾರಿತ್ವವನ್ನು ಸ್ವಾಮಿ ಪ್ರಶ್ನಿಸಿದ್ದು, "ಇದು ವಿದೇಶಾಂಗ ಸಚಿವ ಜೈಶಂಕರ್ ಹಾಗೂ ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಲ್ ಅವರ ತೀರ್ಮಾನಗಳಿಂದ ಆದ ಅವ್ಯವಸ್ಥೆ" ಎಂದು ಹೇಳಿದ್ದಾರೆ.