ಬೆಂಗಳೂರು, ಆ 14 (DaijiworldNews/PY): "ನೆಹರುರವರ ಹುಕ್ಕಾದ ತುದಿಯ ಬೆಂಕಿ ಸಿಟಿ ರವಿಯ ಬುಡ ಸುಡುವುದೇಕೆ? ಬಿಜೆಪಿಗರ ಬಾಯಲ್ಲಿ ಹೊಗೆ ಬರುವುದೇಕೆ!?" ಎಂದು ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ನೆಹರುರವರ ಹುಕ್ಕಾದ ತುದಿಯ ಬೆಂಕಿ ಸಿಟಿ ರವಿಯ ಬುಡ ಸುಡುವುದೇಕೆ? ಬಿಜೆಪಿಗರ ಬಾಯಲ್ಲಿ ಹೊಗೆ ಬರುವುದೇಕೆ!? ನೆಹರು ಹುಕ್ಕಾದ ಬಗ್ಗೆ, ವಾಜಪೇಯಿ ಬೀಫ್ ತಿಂದಿದ್ದರ ಬಗ್ಗೆ ಕೇಳುವುದು ತಪ್ಪು ಹಾಗೂ ಅಪ್ರಸ್ತುತ, ಅದು ಅವರ ವೈಯುಕ್ತಿಕ ವಿಚಾರ ಸಿ ಟಿ ರವಿ. ಈಗ ಕೇಳಬೇಕಿರುವುದು ಮೇಕೆದಾಟು ವಿಚಾರದಲ್ಲಿ ನಿಮ್ಮ ರಾಜ್ಯವಿರೋಧಿ ನಿಲುವೇಕೆ?" ಎಂದು ಪ್ರಶ್ನಿಸಿದೆ.
"ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಬೇಕೋ, ಬೇಡವೋ ಎಂದು ಜನಾಭಿಪ್ರಾಯ ಸಂಗ್ರಹಿಸುತ್ತದೆಯಂತೆ ಬಿಜೆಪಿ. ಪೆಟ್ರೋಲ್ ರೇಟ್ ಇಳಿಸಬೇಕೋ, ಬೇಡವೋ?. ಉದ್ಯೋಗ ನೀಡಬೇಕೋ, ಬೇಡವೋ?. ಲಸಿಕೆ ನೀಡಬೇಕೋ, ಲಾಕ್ಡೌನ್ ಮಾಡಬೇಕೋ?. ಬೆಲೆ ಏರಿಕೆ ತಡೆಯಬೇಕೋ, ಬೇಡವೋ?. ಮುಂತಾದ ಜನಪರ ವಿಚಾರಗಳ ಅಭಿಪ್ರಾಯ ಕೇಳುವ ತಾಕತ್ತಿದೆಯೇ ಬಿಜೆಪಿಗೆ?" ಎಂದು ಕೇಳಿದೆ.
"ಹಲವು ದೇಶಗಳು ತಮ್ಮ ದೇಶದ ಜನತೆಗೆ ಸಂಪೂರ್ಣ ಲಸಿಕೆ ನೀಡಿ ಕೋವಿಡ್ ನಿಯಮಗಳನ್ನು ರದ್ದುಗೊಳಿಸಿ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿವೆ ಒಂದು ವರ್ಷ ಸಮಯಾವಕಾಶ ಇದ್ದರೂ ಬಿಜೆಪಿ ಸರ್ಕಾರ ಲಸಿಕೆ ನೀಡಲಾಗದೆ ಇನ್ನೂ ಸಹ ಲಾಕ್ಡೌನ್ ಮಾಡುವ ಬಗ್ಗೆಯೇ ಚರ್ಚೆಯಲ್ಲಿರುವುದು ವಿಪರ್ಯಾಸ. ಬಿಜೆಪಿಯ ವೈಫಲ್ಯ ರಾಜ್ಯಕ್ಕೆ ದೊಡ್ಡ ಮಾರಕವಾಗಲಿದೆ" ಎಂದಿದೆ.