ಬೆಂಗಳೂರು, ಆ.14 (DaijiworldNews/HR): ಇನ್ಮುಂದೆ ತಾವು ಸಂಚರಿಸುವ ರಸ್ತೆಗಳಲ್ಲಿ ಭದ್ರತೆಗಾಗಿ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆಯನ್ನು ನೀಡಬಾರದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಈಗಾಗಲೇ ಸಭೆ ಸಮಾರಂಭಗಳಲ್ಲಿ ಹಾರಾ, ತುರಾಯಿ ಹಾಕಬಾರದೆಂದು ಸೂಚನೆಯ ಬೆನ್ನಲ್ಲೇ ಸಾರ್ವಜನಿಕರಿಗೆ ಕಿರಿಕಿರಿಯಾಗುವುದನ್ನು ತಪ್ಪಿಸಲು ತಾವು ಮನೆಯಿಂದ ಹೊರಡುವಾಗ ಅಥವಾ ಅಧಿಕೃತ ಕಾರ್ಯಕ್ರಮಕ್ಕೆ ಹೋಗುವ ಸಂದರ್ಭದಲ್ಲಿ ಭದ್ರತೆಗಾಗಿ ಝೀರೋ ಟ್ರಾಫಿಕ್ ವ್ಯವಸ್ಥೆ ನೀಡಬಾರದು ಎಂದು ಸೂಚನೆ ನೀಡಿದ್ದಾರೆ.
ಇನ್ನು "ಸಾರ್ವಜನಿಕರಿಗೆ ಝೀರೋ ಟ್ರಾಫಿಕ್ ನಿಂದ ತೊಂದರೆಯಾಗುತ್ತಿದ್ದು, ನಾನು ಎಲ್ಲರಂತೆ ವಾಹನದಲ್ಲಿ ಸಂಚರಿಸುತ್ತೇನೆ. ಹಾಗಾಗಿ ನನಗೆ ಝೀರೋ ಟ್ರಾಫಿಕ್ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.