ನವದೆಹಲಿ, ಆ. 13 (DaijiworldNews/SM): ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೇಶದೆಲ್ಲೆಡೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಲು ಕೇಂದ್ರ ಸರಕಾರ ಮುಂದಾಗಿದೆ. ಪ್ಲಾಸ್ಟಿಕ್ ವಸ್ತುಗಳು, ಅವುಗಳ ತಯಾರಿಕೆ, ಆಮದು, ದಾಸ್ತಾನು, ವಿತರಣೆ ಮತ್ತು ಮಾರಾಟ ನಿಷೇಧಿಸಲು ಸರಕಾರ ಮುಂದಾಗಿದೆ.
ಪ್ಲೇಟ್ ಗಳು, ಕಪ್ ಗಳು, ಸಿಗರೇಟ್ ಪ್ಯಾಕೇಟ್ ಸೇರಿದಂತೆ ಹಲವು ವಿಧದ ಪ್ಲಾಸ್ಟಿಕ್ ತಯಾರಿಕೆ, ದಾಸ್ತಾನು, ಮಾರಾಟ ನಿಷೇಹಿಸಲು ಕೇಂದ್ರ ಸರಕಾರ ಕರಡು ರೂಪಿಸಿದೆ. ಸೆಪ್ಟೆಂಬರ್ 30, 2021ರಿಂದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಾತ್ರವನ್ನು 50 ಮೈಕ್ರಾನ್ ಗಳಿಂದ 75 ಮೈಕ್ರಾನ್ ಗಳಿಗೆ ಹೆಚ್ಚಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇನ್ನುಳಿದಂತೆ ಮುಂದಿನ ವರ್ಷದ ಜುಲೈ 1ರಿಂದ ಪಾಲಿಸ್ಟೈರೀನ್ ಸೇರಿದಂತೆ ಏಕ ಬಳಕೆ ಪ್ಲಾಸ್ಟಿಕ್ ತಯಾರಿಕೆ, ಆಮದು, ದಾಸ್ತಾನು, ವಿತರಣೆ ಮತ್ತು ಮಾರಾಟವನ್ನು ಬಂದ್ ಮಾಡಲು ಕೇಂದ್ರ ನಿರ್ಧರಿಸಿದೆ.