ನವದೆಹಲಿ, ಆ. 13 (DaijiworldNews/SM): ರಾಹುಲ್ ಗಾಂಧಿಯವರ ಟ್ವಿಟ್ಟರ್ ಖಾತೆ ಅಮಾನತುಗೊಂಡಿರುವ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವ್ಯಂಗ್ಯವಾಡಿದ್ದಾರೆ. ರಾಹುಲ್ ಗಾಂಧಿ ಸಕ್ರೀಯವಾಗಿದ್ದ ಏಕೈಕ ತಾಣವಾದ ಟ್ವಿಟ್ಟರ್ ನಿಂದಲೂ ಅವರನ್ನು ಹೊರ ಹಾಕಲಾಗಿದೆ ಎಂದು ಟಾಂಗ್ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಲಾಗಿದೆ. ರಾಹುಲ್ ಸಕ್ರೀಯವಾಗಿದ್ದ ಏಕೈಕ ತಾಣ ಇದಾಗಿದೆ. ಆದರೆ, ಅಲ್ಲಿಂದಲೂ ಅವರನ್ನು ಹೊರ ಹಾಕಲಾಗಿದೆ. ಇದೀಗ ರಾಹುಲ್ ಅವರು ತಮ್ಮ ಖಾತೆಯನ್ನು ಮರು ಸ್ಥಾಪಿಸಲು ಮೋದಿ ಸರ್ಕಾರ ಜಾರಿಗೊಳಿಸಿದ ಹೊಸ ಸಾಮಾಜಿಕ ಮಾಧ್ಯಮ ನಿಯಮಗಳನ್ನೇ ಬಳಸಬೇಕು ಎಂದಿದ್ದಾರೆ.