ಮೈಸೂರು, ಆ 13 (DaijiworldNews/PY): "ಶಾಸಕ ಸತೀಶ್ ರೆಡ್ಡಿ ಅವರ ಮನೆ ಮುಂದೆ ನಿಲ್ಲಿಸಿದ್ದ ಎರಡು ಕಾರುಗಳಿಗೆ ಬೆಂಕಿ ಹಚ್ಚಿದ್ದೇ ಬಿಜೆಪಿಯವರು. ಈ ಕುರಿತು ಪೊಲೀಸರು ತನಿಖೆಯ ಮೂಲಕ ಬಹಿರಂಗಪಡಿಸಲಿ" ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸವಾಲೆಸೆದಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಶಾಸಕ ಸತೀಶ್ ರೆಡ್ಡಿ ಬೆಂಗಳೂರಿನಲ್ಲಿ ಬ್ಲಾಕ್ ದಂಧೆ ಮಾಡುತ್ತಿದ್ದವನು. ಬಿಜೆಪಿಯವರೇ ಇದನ್ನು ಬಯಲು ಮಾಡಿದ್ದು. ಆ ನಂತರ ನಾಟಕವಾಡಿದ್ದರು. ಹಾಗೆಯೇ ಶಾಸಕರ ಕಾರಿಗೆ ಬೆಂಕಿ ಹಚ್ಚಿದ್ದು ಬಿಜೆಪಿಗರೇ" ಎಂದಿದ್ದಾರೆ.
"ಕಾಂಗ್ರೆಸ್ ಮುಖಂಡರ ಬಗ್ಗೆ ಮಾತನಾಡುವಂತ ಸಿ ಟಿ ರವಿ ಓರ್ವ ಕೊಲೆಗಡುಕ. 2019ರಲ್ಲಿ ಕುಣಿಗಲ್ ಬಳಿ ಮದ್ಯಸೇವನೆ ಮಾಡಿ ಕಾರು ಚಲಾಯಿಸಿ, ಇಬ್ಬರ ಸಾವಿಗೆ ಕಾರಣರಾಗಿದ್ದಾರೆ. ಇಂತ ವ್ಯಕ್ತಿಗೆ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಈ ರೀತಿಯಾಗಿ ಮಾತನಾಡಿದರೆ ಅವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ" ನೀಡಿದ್ದಾರೆ.