ಬೆಂಗಳೂರು, ಆ 13 (DaijiworldNews/PY): "ಕೊರೊನಾ ಸೋಂಕು ನಿಯಂತ್ರಣಕ್ಕೆ ಕಠಿಣ ನಿಯಮ ಜಾರಿ ನಿಟ್ಟಿನಲ್ಲಿ ಆಗಸ್ಟ್ 15ರ ಬಳಿಕ ತುರ್ತು ಸಭೆ ನಡೆಸಲಾಗುವುದು" ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ನಿಯಂತ್ರಣಕ್ಕೆ ಸ್ಲೋ ಮೆಡಿಸಿಲ್ ನೀಡುತ್ತೇವೆ. ನೈಟ್ ಕರ್ಫ್ಯೂ ಸಂದರ್ಭ ಸಾರ್ವಜನಿಕ ಸಭೆ ಸೇರಿದಂತೆ ಸಮಾರಂಭ, ದೇವಸ್ಥಾನಗಳಿಗೆ ನಿಯಂತ್ರಣ ವಿಧಿಸುತ್ತೇವೆ. ಈ ಕುರಿತು ಆಗಸ್ಟ್ 15ರ ಬಳಿಕ ತುರ್ತು ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು" ಎಂದಿದ್ದಾರೆ.
"ಕರ್ನಾಟಕ ಸ್ಟ್ಯಾಂಪ್ ವಿಧೇಯಕ ತಿದ್ದುಪಡಿ ಮಾಡಿದ್ದೇವೆ. 45 ಲಕ್ಷ ಫ್ಲ್ಯಾಟ್ ಖರೀದಿಸುವವರಿಗೆ ಸ್ಟ್ಯಾಂಪ್ ಡ್ಯೂಟಿಯನ್ನು ಶೇ.5ರಿಂದ 3ಕ್ಕೆ ಇಳಿಸಲಾಗಿದೆ" ಎಂದು ತಿಳಿಸಿದ್ದಾರೆ.