ಬೆಳಗಾವಿ, ಆ 13 (DaijiworldNews/MS): ತಮ್ಮ ಹೋಟೆಲ್ ನ ಬಿರಿಯಾನಿ ಪ್ರಚಾರಕ್ಕಾಗಿ ಹಿಂದೂ ಸಂತರ ಚಿತ್ರವನ್ನು ಬಳಸಿದ್ದಕ್ಕಾಗಿ ಹಿಂದು ಸಂಘಟನೆಗಳು ಬೆಳಗಾವಿಯ ಪ್ರಸಿದ್ಧ ರೆಸ್ಟೋರೆಂಟ್ನಿಂದ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿವೆ.
ನಗರದಲ್ಲಿ ಅನೇಕ ರೆಸ್ಟೋರೆಂಟ್ಗಳನ್ನು ಹೊಂದಿರುವ 'ನಿಯಾಜ್ ಹೋಟೆಲ್' ಸಾಮಾಜಿಕ ಮಾಧ್ಯಮದಲ್ಲಿ ಬಿರಿಯಾನಿ ಖ್ಯಾದ್ಯವನ್ನು ಪ್ರಚಾರ ಪಡಿಸಲೆಂದು ಪೋಸ್ಟರ್ಗಳನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಒಬ್ಬ ಹಿಂದೂ ಸಂತ "ನಿಯಾಜ್ ಬಿರಿಯಾನಿ ರುಚಿ ನೋಡಿದ ನಂತರ ಗುರೂಜಿ" ತನ್ನ ಭಕ್ತರಿಗೆ 'ಬಲಿದಾನ್' (ತ್ಯಾಗ) ಬದಲು ಬಿರಿಯಾನಿ ನೀಡುವಂತೆ ಕೇಳಿಕೊಳ್ಳವಂತೆ ಚಿತ್ರಿಸಲಾಗಿತ್ತು. 'ಇತರ ಬಿರಿಯಾನಿಗಳಿಗಿಂತ ನಮ್ಮ ಬಿರಿಯಾನಿ-ಅಹಂ ಬ್ರಹ್ಮಾಸ್ಮಿ (ನಾನು ದೈವಿಕ)' ಎಂದು ಶೀರ್ಷಿಕೆ ನೀಡಲಾಗಿತ್ತು.
ಈ ಹಿನ್ನಲೆಯಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಮತ್ತು ಭಜರಂಗದಳದ ನಾಯಕರು ಸೇರಿದಂತೆ ಹಿಂದೂ ಸಂಘಟನೆಗಳು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿ ಹೋಟೆಲ್ ನಿರ್ವಹಣೆಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ
ಹೋಟೆಲ್ ಆಡಳಿತವು ಹಿಂದೂ ಸಂತರನ್ನು ಅವಮಾನಿಸಿದೆ. ಇದು ಸ್ವೀಕಾರಾರ್ಹವಲ್ಲ ಎಂದು ಅವರು ಪ್ರತಿಪಾದಿಸಿದರು. ಪೊಲೀಸ್ ಅಧಿಕಾರಿಗಳು ನಗರದ ಎಲ್ಲಾ ನಿಯಾಜ್ ರೆಸ್ಟೋರೆಂಟ್ಗಳನ್ನು ಮುಚ್ಚಿ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ಇದಾದ ಬಳಿಕ ರ ಹೋಟೆಲ್ ಮ್ಯಾನೇಜ್ಮೆಂಟ್ ವಿವಾದಾತ್ಮಕ ಪೋಸ್ಟರ್ ಅನ್ನು ತೆಗೆದು ಹಾಕಿ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಕ್ಷಮೆಯಾಚಿಸಿದೆ.