ಬೆಂಗಳೂರು, ಆ.13 (DaijiworldNews/HR): ಬೆಂಗಳೂರು ನಗರದಲ್ಲಿ ಜುಲೈ 22 ರಿಂದ ಆಗಸ್ಟ್ 10 ರವರೆಗೆ 19 ವರ್ಷದೊಳಗಿನ 995 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಪೋಷಕರಲ್ಲಿ ಆತಂಕ ಮೂಡಿಸಿದೆ.
ಸಾಂಧರ್ಭಿಕ ಚಿತ್ರ
ಮಾಹಿತಿ ಪ್ರಕಾರ, "9 ವರ್ಷದೊಳಗಿನ 88 ಮಕ್ಕಳು ಮತ್ತು 10 ರಿಂದ 19 ವರ್ಷದೊಳಗಿನ 305 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದ್ದು, ಜುಲೈ ತಿಂಗಳ ಕೊನೆಗೆ 496 ಮಕ್ಕಳಲ್ಲಿ ಸೋಂಕು ಕಂಡು ಬಂದಿದೆ.
ಇನ್ನು ಮಕ್ಕಳನ್ನು ಸೋಂಕು ದೃಢಪಟ್ಟ ಮಕ್ಕಳನ್ನು ಯಾವುದೇ ಆಸ್ಪತ್ರೆ ಅಥವಾ ಆರೈಕೆ ಕೇಂದ್ರಗಳಿಗೆ ದಾಖಲಿಸಿಲ್ಲ. ಎಲ್ಲರೂ ಮನೆಯಲ್ಲಿಯೇ ಆರೈಕೆಯಲ್ಲಿದ್ದಾರೆ. ಸೋಂಕಿತ ಮಕ್ಕಳ ಪೈಕಿ 12 ರಿಂದ 19 ವರ್ಷದೊಳಗಿನ ಮಕ್ಕಳೇ ಅಧಿಕ ಸಂಖ್ಯೆಯಲ್ಲಿದ್ದಾರೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಮಕ್ಕಳಿಗೆ ಲಸಿಕೆ ಹಾಕಲು ಆರಂಭಿಸಿಲ್ಲ. ಹಾಗಾಗಿ ಪೋಷಕರು ಹೆಚ್ಚು ಜಾಗೃತರಾಗಿರಬೇಕು. ಮಾಸ್ಕ್ ಧರಿಸುವ ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳುವುದರಿಂದ ಮಕ್ಕಳು ಸಹ ಸುರಕ್ಷಿತವಾಗಿರುತ್ತಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.