ಬೆಂಗಳೂರು, ಆ.13 (DaijiworldNews/HR): ಬಿಜೆಪಿ ಮುಖಂಡ ಸಿ.ಟಿ.ರವಿ ಅವರಿಗೆ ಕ್ಯಾಸಿನೋ, ಜೂಜು, ಬಾರ್, ಹುಕ್ಕಾ, ಚೆಂಡು ಹೂ ಇವೆಲ್ಲ ಸಿಟಿ ರವಿಗೆ ಬಹು ಪ್ರಿಯವಾದವು ಎಂದು ಕಾಂಗ್ರೆಸ್ ಹೇಳಿದೆ.
ನೆಹರೂ ಹುಕ್ಕಾ ಬಾರ್ ಹೇಳಿಕೆಗೆ ಆಕ್ಷೇಪ ವ್ಯಕ್ತ ಪಡಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, "ಕೊಳಕು ನಾಲಿಗೆಯ ಸಿಟಿ ರವಿ ಹಿಂದೆ ಪ್ರವಾಸೋದ್ಯಮ ಸಚಿವರಾಗಿದ್ದಾಗ ರಾಜ್ಯದಲ್ಲಿ ಕ್ಯಾಸಿನೋ ತೆರೆಯಲು ಮುಂದಾಗಿದ್ದರು. ಸಿಟಿ ರವಿ ಅವರೇ, ಆ ನಿಮ್ಮ ಮಹತ್ವಾಕಾಂಕ್ಷಿ ಯೋಜನೆಗೆ 'ದೀನದಯಾಳ್ ಕ್ಯಾಸಿನೋ ಯೋಜನೆ' ಎಂದು ನಾಮಕರಣ ಮಾಡ್ತಿದ್ರಾ" ಎಂದು ಪ್ರಶ್ನಿಸಿದೆ.
ಇನ್ನು "ಇಂದಿರಾ ಕ್ಯಾಂಟಿನ್ ಮಾದರಿಯಾದರೂ ಕಳಪೆ ಗುಣಮಟ್ಟದ 'ದೀನ್ ದಯಾಳ್ ಉಪಾಧ್ಯಾಯ ರಸೊಯ್' ಎಂಬ ಕ್ಯಾಂಟೀನ್ ತೆರೆದಿದೆ ಮಧ್ಯಪ್ರದೇಶದ ಬಿಜೆಪಿ ಸರ್ಕಾರ. ಆ ಯೋಜನೆಯ ಹಣ ದೀನದಯಾಳ್ ಆಸ್ತಿ ಮಾರಿದ್ದೇ? ಅಥವಾ ಆತ ಮಾಜಿ ಪ್ರಧಾನಿಯೇ? ಸ್ವತಂತ್ರ ಹೊರಾಟಗಾರನೇ? ಎಂದು ಪ್ರಶ್ನಿಸಿರುವ ಕಾಂಗ್ರೆಸ್, ದೇಶಕ್ಕೆ ಒಂದು ಹನಿ ಕೊಡುಗೆಯನ್ನೂ ಕೊಡದ ಆತನ ಹೆಸರೇಕೆ ಇಟ್ಟಿದ್ದಾರೆ" ಎಂದು ಹೇಳಿದೆ.