ಕೋಲ್ಕತ್ತ, ಆ.13 (DaijiworldNews/HR): ಕೊರೊನಾ ಲಸಿಕೆ ಪ್ರಮಾಣ ಪತ್ರಗಳ ಮೇಲೆ ಪ್ರಧಾನ ಮಂತ್ರಿಗಳ ಚಿತ್ರ ಹಾಕಿರುವ ವಿಚಾರವಾಗಿ ವಿರೋಧ ವ್ಯಕ್ತಪಡಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಮರಣ ಪ್ರಮಾಣ ಪತ್ರಗಳ ಮೇಲೂ ಪ್ರಧಾನಿ ಪೋಟೊ ಹಾಕಿಸಿಕೊಳ್ಳಿ ಎಂದು ಹೇಳಿದ್ದಾರೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಅವರು, "ಒಬ್ಬ ವ್ಯಕ್ತಿ ನಿಮ್ಮ ಬೆಂಬಲಿಗನಲ್ಲದೇ ಇರಬಹುದು. ಆದರೆ ಕೊರೊನಾ ಲಸಿಕಾ ಪ್ರಮಾಣ ಪತ್ರಗಳ ಮೇಲೆ ನಿಮ್ಮ ಫೋಟೋ ಕಡ್ಡಾಯ ಮಾಡಿದ್ದೀರಿ. ನನಗೆ ನೀವು ಇಷ್ಟವಾಗದೇ ಇರಬಹುದು. ಆದರೂ ಕೂಡ ನಾನೇಕೆ ಇದನ್ನು ಇಟ್ಟುಕೊಳ್ಳಬೇಕು? ಎಲ್ಲಿದೆ ಸ್ವಾತಂತ್ರ್ಯ? ಈಗ ಮರಣ ಪ್ರಮಾಣ ಪತ್ರಗಳ ಮೇಲೂ ನಿಮ್ಮ ಫೋಟೋ ಇಡಬೇಕೆ?" ಎಂದು ಪ್ರಶ್ನಿಸಿದ್ದಾರೆ.
ಇನ್ನು ಲಸಿಕೆ ಪ್ರಮಾಣ ಪತ್ರಗಳ ಮೇಲೆ ಪ್ರಧಾನ ಮಂತ್ರಿಯ ಫೊಟೋಗಳನ್ನು ಮೊದಲು ತೆಗೆಯಬೇಕೆಂದು ಆಗ್ರಹಿಸುತ್ತಿರುವ ತೃಣಮೂಲ ಕಾಂಗ್ರೆಸ್ನ ಸಂಸದ ಡೆರೆಕ್ ಒ'ಬ್ರಯಾನ್ ಅವರು ಚುನಾವಣಾ ಆಯೋಗಕ್ಕೆ ಈ ಸಂಬಂಧ ಮನವಿ ಮಾಡಿಕೊಂಡಿದ್ದಾರೆ.