ನವದೆಹಲಿ, ಆ.13 (DaijiworldNews/HR): ವಾಹನ ಸ್ಕ್ರಾಪೇಜ್ ಪಾಲಿಸಿಯು ಭಾರತದ ಅಭಿವೃದ್ಧಿ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಾಹನ ಸ್ಕ್ರಾಪೇಜ್ ಪಾಲಿಸಿಯನ್ನು ಇಂದು ಆರಂಭಿಸಿ ಮಾತನಾಡಿದ ಅವರು, "ದೇಶದ ನಗರಗಳಲ್ಲಿ ಮಾಲಿನ್ಯವನ್ನು ತಗ್ಗಿಸಲು, ಪರಿಸರವನ್ನು ರಕ್ಷಿಸಲು ಮತ್ತು ಅಭಿವೃದ್ಧಿಯ ವೇಗವನ್ನು ಹೊಂದಲು ಮತ್ತು ಭಾರತದ ಅಭಿವೃದ್ಧಿ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಲು ಈ ನೀತಿಯು ಪ್ರಯೋಜನಕಾರಿಯಾಗಿದೆ" ಎಂದರು.
ಈ ಕುರಿತು ಟ್ವೀಟರ್ನಲ್ಲಿ ಹಂಚಿಕೊಂಡ ಪ್ರಧಾನಿ ಮೋದಿ, ಯುವಕರು ಮತ್ತು ಸ್ಟಾರ್ಟ್ ಅಪ್ ಗಳಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಕೋರಿದದು, ಪರಿಸರ ಸ್ನೇಹಿ ಯೋಜನೆಯ ಭಾಗವಾಗಿ ಈ ಪಾಲಿಸಿಯನ್ನು ಜಾರಿಗೊಳಿಸಲಾಗಿದದು, ಪರಿಸರದ ಬಗ್ಗೆ ಎಲ್ಲಾ ಸ್ಟೇಕ್ ಹೋಲ್ಡರ್ಸ್ ಜವಾಬ್ದಾರಿಯಿಂದ ಈ ಪಾಲಿಸಿಯೊಂದಿಗೆ ಕೈ ಜೋಡಿಸಬೇಕು ಎಂದು ಒತ್ತಾಯಿಸಿದ್ದಾರೆ.