ತ್ರಿಶೂರ್ ,ಆ 13 (DaijiworldNews/MS): ವೃತ್ತಿಯಲ್ಲಿ ಪ್ರಾಂಶುಪಾಲರಾಗಿದ್ದರೂ, ಇವರೂ ತಮ್ಮ ವಿದ್ಯಾರ್ಥಿ ಜೀವನವನ್ನು ಇನ್ನೂ ಮುಗಿಸಿಲ್ಲ.! ಹೌದು ಅಚ್ಚರಿ ಆದರೂ ಸತ್ಯ ಕಲಿಕೆಗೆ ಕೊನೆಯಿಲ್ಲ ಎಂಬ ಮಾತು ಅಕ್ಕಿಕ್ಕಾವು ಮಾರ್ ಒಸ್ತಥಿಯೋಸ್ ಕಾಲೇಜಿನ ಪ್ರಾಂಶುಪಾಲರಾದ ಸಿ.ಪಿ.ಬಾಬು ಅವರಿಗೆ ಅಕ್ಷರಶಃ ಅನ್ವಯಿಸುತ್ತದೆ. ಏಕೆಂದರೆ 10 ಪಿಜಿ ಕೋರ್ಸ್ಗಳು ಮತ್ತು ಪಿಎಚ್ಡಿ ಪೂರ್ಣಗೊಳಿಸಿದ್ದರೂ ಈ ಕಾಲೇಜಿನ ಪ್ರಾಂಶುಪಾಲರು ಇನ್ನೂ ವಿದ್ಯಾರ್ಥಿಯಾಗಿದ್ದಾರೆ.
ಸಿ.ಪಿ.ಬಾಬು ಅವರಿಗೆ ವೈದ್ಯರಾಗುವುದು ಕನಸಾಗಿತ್ತು. ಆದರೆ ಎರಡು ಬಾರಿ ಅವರು ಪ್ರವೇಶ ಪರೀಕ್ಷೆ ಬರೆದರೂ ತಾವು ಆಯ್ಕೆಯಾಗಲಿಲ್ಲ. ಹಾಗೆಂದು ಸುಮ್ಮನಾಗಲಿಲ್ಲ. ಶಿಕ್ಷಕ ವೃತ್ತಿಯೊಂದಿಗೆ ಅವರು ತಮ್ಮ ಶಿಕ್ಷಣವನ್ನು ಮುಂದುವರಿಸಿದರು. ಸದ್ಯ ಅವರು ಹತ್ತು ಸ್ನಾತಕೋತ್ತರ ಕೋರ್ಸ್ಗಳನ್ನು ಪೂರ್ಣಗೊಳಿಸಿದ್ದಾರೆ. ಮಾತ್ರವಲ್ಲದೆ ಅವರು "ಕಾಲಡಿ ವಿಶ್ವವಿದ್ಯಾಲಯ"ದಿಂದ ಶೈಕ್ಷಣಿಕ ಮನೋವಿಜ್ಞಾನದಲ್ಲಿ ಡಾಕ್ಟರೇಟ್ ನ್ನು ಪಡೆದಿದ್ದಾರೆ. "ಭೋಧಕರಾಗಿದ್ದಾಗ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದೇ ಮುಖ್ಯ ವಾಗುತ್ತದೆ. ಇದು ಸಾಮಾನ್ಯವಾಗಿ ನಿವೃತ್ತಿಯವರೆಗೂ ಮುಂದುವರಿಯುತ್ತದೆ. ಕಲಿಕೆಯೊಂದಿಗೆ ಜ್ಞಾನ ಬೆಳೆಯುತ್ತದೆ" ಎಂಬುವುದು , ಬಾಬು ಅವರ ತತ್ವವಾಗಿದೆ.
1987 ರಲ್ಲಿ ತ್ರಿಶೂರ್ ನ ಸೇಂಟ್ ಥಾಮಸ್ ಕಾಲೇಜಿನಿಂದ ಸಸ್ಯಶಾಸ್ತ್ರದಲ್ಲಿ ಪದವಿ ಪಡೆದ ನಂತರ ಅವರು ವಿಜ್ಞಾನದಲ್ಲಿ ಬಿ.ಎಡ್ ಮತ್ತು ಎಂ.ಎಡ್ ಮುಗಿಸಿದರು. ನಂತರ ಅವರು 2014 ರೊಳಗೆ 10 ಪಿಜಿ ಕೋರ್ಸ್ಗಳನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದ್ದರು. ಇದರೊಂದಿಗೆ ಬೋಧನೆಯನ್ನು ಮುಂದುವರಿಸಿದ್ದರಿಂದ ಕಲಿಕೆಯು ಅವರಿಗೆ ದೊಡ್ಡ ಸಮಸ್ಯೆಯಾಗಿರಲಿಲ್ಲ. ಈಗ, ಅವರು M.Sc ಅಪ್ಲೈಡ್ ಸೈಕಾಲಜಿ ಓದುವುದನ್ನು ಮುಂದುವರಿಸಿದ್ದಾರೆ.
ವೇಲೂರಿನ ಕುರುವನ್ನೂರಿನವರಾಗಿರುವ ಬಾಬು ಅವರು 42 ನೇ ವಯಸ್ಸಿನಲ್ಲಿ, ಅವರು ಲಬ್ಬಕ್ಕಡದ ಜಾನ್ ಪಾಲ್ ಸ್ಮಾರಕ ಬಿ.ಎಡ್ ಕಾಲೇಜಿನ ಪ್ರಾಂಶುಪಾಲರಾದರು. ಕ್ಯಾಲಿಕಟ್ ಮತ್ತು ಭಾರತೀಯ ವಿಶ್ವವಿದ್ಯಾಲಯಗಳ ಪಿಜಿ ಸೈಕಾಲಜಿ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ಯಾಲಿಕಟ್ ವಿಶ್ವವಿದ್ಯಾಲಯದ ಪ್ರಿನ್ಸಿಪಲ್ ಕೌನ್ಸಿಲ್ ನ ಜಿಲ್ಲಾ ಅಧ್ಯಕ್ಷರೂ ಆಗಿದ್ದಾರೆ. ಇದರೊಂದಿಗೆ ತ್ರಿಶೂರ್ ಧರ್ಮಪ್ರಾಂತ್ಯದಲ್ಲಿ ಧಾರ್ಮಿಕ ಅಧ್ಯಯನದ ಶಿಕ್ಷಕರಾಗಿದ್ದಾರೆ. ಇವ ವರ ಪತ್ನಿಯೂ ತ್ರಿಶೂರ್ ಥೋಪ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ