ನವದೆಹಲಿ, ಆ 13 (DaijiworldNews/MS): ಜೂನ್ ಹಾಗೂ ಜುಲೈ ನಡುವಿನ ಒಂದು ತಿಂಗಳ ಅವಧಿಯಲ್ಲಿ 120 ದೂರುಗಳನ್ನು ಸ್ವೀಕರಿಸಿದ್ದು, 167 ಯುಆರ್ಎಲ್ಗಳ ಮೇಲೆ ಕ್ರಮ ತೆಗೆದುಕೊಂಡಿರುವುದಾಗಿ ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್ ತಿಳಿಸಿದೆ.
ಐಟಿ ನಿಯಮಗಳ ಅನ್ವಯ ಜೂನ್ 26 ಮತ್ತು ಜುಲೈ 25 ರ ನಡುವೆ ಈ ಅವಧಿಯಲ್ಲಿ ಪೂರ್ವಭಾವಿ ಡೇಟಾ ಮೇಲ್ವಿಚಾರಣೆಯ ಮೂಲಕ 31,637 ಖಾತೆಗಳನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದೆ.
ದೂರುಗಳನ್ನು ಸ್ವೀಕರಿಸಲೆಂದೇ ವಿಶೇಷ ಅಧಿಕಾರಿಯೊಬ್ಬರನ್ನು ಟ್ವಿಟರ್ ನೇಮಕ ಮಾಡಿದ್ದು, ಕೋರ್ಟ್ ಆದೇಶಾನುಸಾರ ದೂರುಗಳನ್ನು ತಂದ ವೈಯಕ್ತಿಕ ಬಳಕೆದಾರರ ಪ್ರಶ್ನೆಗಳನ್ನೂ ಸ್ವೀಕರಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.
ನಿಂದನೆ/ಕಿರುಕುಳ (36), ತಪ್ಪು ಮಾಹಿತಿ/ಸಂಶ್ಲೇಷಿತ ಮಾಧ್ಯಮ (28), ಮಾನನಷ್ಟ ಮತ್ತು ಐಪಿ ಸಂಬಂಧಿತ ಉಲ್ಲಂಘನೆ (ತಲಾ 13), ದ್ವೇಷದ ವರ್ತನೆ (12), ಸೋಗು ಹಾಕುವಿಕೆ (8), ಸೂಕ್ಷ್ಮ ವಯಸ್ಕರ ವಿಷಯ (5), ಗೌಪ್ಯತೆ ಉಲ್ಲಂಘನೆ (4) ಮತ್ತು ಭಯೋತ್ಪಾದನೆ/ಹಿಂಸಾತ್ಮಕ ಉಗ್ರವಾದ (1).
ದುರುಪಯೋಗ/ಕಿರುಕುಳ ಮತ್ತು IP- ಸಂಬಂಧಿತ ಉಲ್ಲಂಘನೆ (ತಲಾ 46), ನಂತರ ಗೌಪ್ಯತೆ ಉಲ್ಲಂಘನೆ (35), ಸೋಗು ಹಾಕುವಿಕೆ (16) ಮತ್ತು ಮಾನನಷ್ಟ (15) ಗೆ ಸಂಬಂಧಿಸಿದ ಹೆಚ್ಚಿನ ಸಂಖ್ಯೆಯ ಯುಆರ್ಎಲ್ ಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ತಪ್ಪು ಮಾಹಿತಿ/ಸಿಂಥೆಟಿಕ್ ಮತ್ತು ಮ್ಯಾನಿಪ್ಯುಲೇಟೆಡ್ ಮೀಡಿಯಾ ವರ್ಗದ ಅಡಿಯಲ್ಲಿ ಕ್ರಿಯಾಶೀಲವಾಗಿರುವ ಯುಆರ್ಎಲ್ ಗಳ ಮೇಲೆ 7 ಮತ್ತು ಸೂಕ್ಷ್ಮ ವಯಸ್ಕರ ವಿಷಯ ಮತ್ತು ದ್ವೇಷದ ನಡವಳಿಕೆ (ತಲಾ ಒಂದು) ದೂರು ದಾಖಲಾಗಿದ್ದು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.