ಕಾರವಾರ, ಆ 13 (DaijiworldNews/MS): ಸಿದ್ಧಿ ಸಮುದಾಯದ ನಾಯಕ, ಹೋರಾಟಗಾರ, ಕರ್ನಾಟಕದ ನೆಲ್ಸನ್ ಮಂಡೇಲಾ ಎಂದೇ ಖ್ಯಾತರಾದ ಯಲ್ಲಾಪುರ ತೊಟ್ಟಿಲ್ಗುಂಡಿಯ ( ಹಳಿಯಾಳ ) ಡಿಯಾಗೋ ಬಸ್ತ್ಯಾವ್ ಸಿದ್ಧಿ (75) ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದಿ ಸಮುದಾಯದ ನಾಯಕ ಯಲ್ಲಾಪುರ ತೊಟ್ಟಿಲ್ಗುಂಡಿಯ ಡಿಯಾಗೋ ಬಸ್ತ್ಯಾವ್ ಸಿದ್ಧಿ ಗುರುವಾರ ನಿಧನರಾಗಿದ್ದಾರೆ.
ಡಿಯೋ ಬಸ್ತ್ಯಾವ್ ಸಿದ್ಧಿ ಅವರು ತಮ್ಮ ಜೀವನವೀಡಿ ಸಿದ್ಧಿ ಸಮುದಾಯದ ವಿಕಸನ, ಪಶ್ಚಿಮ ಘಟ್ಟದ ಅಡವಿ ಸಂರಕ್ಷಣೆ, ಸಮಾಜ ಸುಧಾರಣೆ ಬಗ್ಗೆ ಹೋರಾಟ ಮಾಡುತ್ತಿದ್ದರು.
ತನ್ನ ಸಮುದಾಯದ ಮತ್ತು ಸಮಾಜ, ಪ್ರಕೃತಿ ಸಂರಕ್ಷಣೆಯ ಬಗ್ಗೆ ಚಿಂತಿಸಿ ಆ ಬಗ್ಗೆ ಕಾರ್ಯ ಪ್ರವೃತ್ತರಾಗಿದ್ದವರು.