ಮುಂಬೈ, ಆ 13 (DaijiworldNews/PY): "ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದ ಸಂಬಂಧ ಉದ್ಯಮಿ ರಾಜ್ ಕುಂದ್ರಾ ಅವರ ಕಂಪೆನಿಯೊಂದರ ನಿರ್ದೇಶಕ ಅಭಿಜಿತ್ ಬೊಂಬ್ಲೆ ಎನ್ನುವವರನ್ನು ಮುಂಬೈ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಶ್ಲೀಲ ಚಿತ್ರ ನಿರ್ಮಾಣ ಹಾಗೂ ಆ್ಯಪ್ ಮೂಲಕ ಪ್ರಸಾರ ಮಾಡುತ್ತಿದ್ದ ಆರೋಪದ ಮೇರೆಗೆ ಕಳೆದ ತಿಂಗಳು ರಾಜ್ ಕುಂದ್ರಾ ಅವರನ್ನು ಬಂಧಿಸಲಾಗಿತ್ತು.
ರೂಪದರ್ಶಿಯೋರ್ವರು ನೀಡಿದ್ದ ದೂರಿನ ಆಧಾರದಲ್ಲಿ ಮಾನ್ವಾನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. "ಕಿರುಚಿತ್ರಗಳು ಹಾಗೂ ವೆಬ್ ಸೀರೀಸ್ಗಳಲ್ಲಿ ನಟಿಸಲು ಅವಕಾಶ ನೀಡುವುದಾಗಿ ಭರವಸೆ ನೀಡ ನಂತರ ನಗ್ನ ದೃಶ್ಯಗಳಲ್ಲಿ ನಟನೆ ಮಾಡುವಂತೆ ಒತ್ತಡ ಹೇರಲಾಗಿತ್ತು" ಎಂದು ದೂರಿನಲ್ಲಿ ರೂಪದರ್ಶಿ ಉಲ್ಲೇಖಿಸಿದ್ದರು.
"ಈ ಪ್ರಕರಣದ ಆರೋಪಿಗಳ ಪೈಕಿ ಅಭಿಜಿತ್ ಬೊಂಬ್ಲೆ ಕೂಡಾ ಒಬ್ಬರು" ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.