ಬೆಂಗಳೂರು, ಆ 12 (DaijiworldNews/MS): ತನಿಖಾ ಶ್ರೇಷ್ಠತೆಗಾಗಿ 2021ನೇ ಸಾಲಿನಲ್ಲಿ ಕರ್ನಾಟಕದ ಆರು ಪೊಲೀಸ್ ಅಧಿಕಾರಿಗಳು ಸೇರಿದಂತೆ 152 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ಪದಕವನ್ನು ನೀಡಿ ಗೌರವಿಸಲಾಗಿದೆ.
ಮಂಗಳೂರು ಡಿವೈಎಸ್ಪಿ ಪರಮೇಶ್ವರ್ ಹೆಗ್ಡೆ, ಸಿಸಿಬಿ ಬೆಂಗಳೂರಿನ ಎಸಿಪಿ ಎಚ್.ಎನ್.ಧರ್ಮೇಂದ್ರ, ಡಿವೈಎಸ್ಪಿ ಸಿ.ವೈ.ಬಾಲಕೃಷ್ಣ , ಪೊಲೀಸ್ ಇನ್ಸ್ಪೆಕ್ಟರ್ಗಳಾದ ಟಿ.ವಿ.ದೇವರಾಜ್, ಮನೋಜ್ ಹೂವಳೆ, ಶಿವಪ್ಪ ಸತ್ತೆಪ್ಪ ಕಮ್ಮಟಗಿ ಅವರುಗಳಿಗೆ ಪ್ರಶಸ್ತಿ ಘೋಷಿಸಲಾಗಿದೆ
ಅಪರಾಧ ತನಿಖೆಯ ಉನ್ನತ ವೃತ್ತಿಪರ ಗುಣಮಟ್ಟಕ್ಕಾಗಿ ದೇಶದಾದ್ಯಂತ 28 ಮಹಿಳಾ ಅಧಿಕಾರಿಗಳು ಸೇರಿದಂತೆ ಒಟ್ಟು 152 ಪೊಲೀಸ್ ಅಧಿಕಾರಿಗಳಿಗೆ ಈ ಪದಕವನ್ನು ನೀಡಲಾಗಿದೆ’ ಎಂದು ಕೇಂದ್ರ ಗೃಹ ಸಚಿವಾಲಯವು ಗುರುವಾರ ಹೇಳಿದೆ.