ನವದೆಹಲಿ, ಆ 12 (DaijiworldNews/PY): "ವಿಪಕ್ಷಗಳು ಮೊಸಳೆ ಕಣ್ಣೀರು ಹಾಕುವುದನ್ನು, ಬಿಟ್ಟು ದೇಶದ ಜನತೆಯಲ್ಲಿ ಕ್ಷಮೆ ಕೋರಬೇಕು" ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಆಗ್ರಹಿಸಿದ್ದಾರೆ.
"ಜನರು ತಮ್ಮ ಸಮಸ್ಯೆಗಳನ್ನು ಸಂಸತ್ತಿನ ಹೇಳುವವರೆಗೂ ಕಾಯುತ್ತಾರೆ. ಆದರೆ, ಅರಾಜಕತೆ ವಿರೋಧ ಪಕ್ಷದ ಕಾರ್ಯಸೂಚಿಯಾಗಿ ಉಳಿಯಿತು. ಜನರ ಬಗ್ಗೆ ಹಾಗೂ ತೆರಿಗೆದಾರರ ಹಣದ ಬಗ್ಗೆ ಅವರು ಕಾಳಜಿ ವಹಿಸಿಲ್ಲ. ಏನಾಗಿದೆ ಎನ್ನುವುದು ಖಂಡನೀಯ. ವಿಪಕ್ಷಗಳು ಮೊಸಳೆ ಕಣ್ಣೀರು ಹಾಕುವುದನ್ನು ಬಿಟ್ಟು, ರಾಷ್ಟ್ರದ ಜನರಲ್ಲಿ ಕ್ಷಮೆ ಕೇಳಬೇಕು" ಎಂದಿದ್ದಾರೆ.
ಈ ವೇಳೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, "ಸರ್ವಪಕ್ಷ ಸಭೆಯ ಮೊದಲ ದಿನದಿಂದ ನಾವು ಸದನವನ್ನು ನಡೆಸಲು ಬಿಡುವವುದಿಲ್ಲ ಎನ್ನುವ ಸೂಚನೆಗಲು ಇರುವುದು ದುರದೃಷ್ಟಕರ. ಈ ಅಧಿವೇಶನವು ವಾಶ್ ಔಟ್ಗಾಗಿ ಎಂದು ಟಿಎಂಸಿ ಹಾಗೂ ಕಾಂಗ್ರೆಸ್ ಸ್ಪಷ್ಟವಾಗಿ ತಿಳಿಸಿದೆ. ಇದರ ಹೊರತಾಗಿಯೂ ಕೂಡಾ ನಾವು, ನಮ್ ಹಿರಿಯ ನಾಯಕರು ಹಾಗೂ ನಾನು ಅನೇಕ ಬಾರಿ ಅವರ ಜೊತೆ ಮಾತನಾಡಿದ್ದೇವೆ. ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರನ್ನು ಪರಿಚಯಿಸಲು ಅವಕಾಶ ನೀಡಿ ಎಂದು ನಾವು ಅವರಲ್ಲಿ ವಿನಂತಿಸಿದ್ದೇವೆ" ಎಂದು ಹೇಳಿದ್ದಾರೆ.