ಮಂಡ್ಯ, ಆ 12 (DaijiworldNews/PY): "ಜಿಲ್ಲೆಯಲ್ಲಿ ಸಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆ ವಿರುದ್ದ ನನ್ನ ಯಾವುದೇ ವಿರೋಧ ಇಲ್ಲ. ಆದರೆ, ಅಕ್ರಮ ಗಣಿಗಾರಿಕೆಗೆ ನನ್ನ ವಿರೋಧವಿದೆ" ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅಕ್ರಮ ಗಣಿಗಾರಿಕೆ ವಿರುದ್ದ ನಾನು ಕಳೆದ ಎರಡು ವರ್ಷಗಳಿಂದ ಹೋರಾಡುತ್ತಾ ಬಂದಿದ್ದೇನೆ. ಈ ವಿಚಾರವಾಗಿ ಸಂಸತ್ತಿನಲ್ಲೂ ವಿಚಾರವೆತ್ತಿದ್ದೇನೆ. ಅಲ್ಲದೇ, ಸದನದ ಗಮನಕ್ಕೂ ತಂದಿದ್ದೇನೆ. ಹಾಗಾಗಿ, ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರೂ ಕೂಡಾ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ" ಎಂದಿದ್ದಾರೆ.
"ಜಿಲ್ಲೆಯ ಹಲವೆಡೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಬಗ್ಗೆ ನಾನು ಧ್ವನಿ ಎತ್ತಿದ ಬಳಿಕ ನನ್ನ ವಿರುದ್ದ ಕೂಡಾ ಧ್ವನಿ ಕೂಡಾ ಎತ್ತಲಾಗಿತ್ತು. ವಿರೋಧಿ ಧ್ವನಿ ಎದ್ದರೂ ಕೂಡಾ ನಾನು ಭಯ ಪಡುವುದಿಲ್ಲ. ಸಕ್ರಮ ಗಣಿಗಾರಿಕೆಗೆ ನನ್ನ ಯಾವುದೇ ವಿರೋಧವಿಲ್ಲ. ಆದರೆ, ಅಕ್ರಮ ಗಣಿಗಾರಿಕೆಗೆ ನನ್ನ ವಿರೋಧವಿದೆ" ಎಂದು ಹೇಳಿದ್ದಾರೆ.