ಚಿಕ್ಕಮಗಳೂರು, ಆ 12 (DaijiworldNews/MS): ತಂದೆಯೇ ತನ್ನ ಪುತ್ರನನ್ನು ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಗೈದಿರುವ ಘಟನೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಕಿರಣ್(32) ಎಂದು ಗುರುತಿಸಲಾಗಿದೆ. ಮಗನಿಗೆ ಗುಂಡಿಕ್ಕಿ ಕೊಂದ ತಂದೆ ಲಕ್ಷ್ಮಣ್ ಗೌಡ (72) ನನ್ನು ಪೊಲೀಸರು ಬಂಧಿಸಿದ್ದಾರೆ.ಲಕ್ಷ್ಮಣ್ ಹಾಗೂ ಅವರ ಮಗ ಕಿರಣ್ ಮನೆಯಲ್ಲಿ ಇಬ್ಬರಿದ್ದ ವೇಳೆ ಕ್ಷುಲ್ಲಕ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ. ಲಕ್ಷಣ ಅವರ ಪತ್ನಿ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದು, ಅವರು ಮಗಳ ಮನೆಯಲ್ಲಿ ವಾಸವಾಗಿದ್ದರು.
ಲಕ್ಷ್ಮಣ್ 5 ಎಕರೆ ಜಮೀನು ಹೊಂದಿದ್ದು, ಇದರಲ್ಲಿ ಮಗ ಕಿರಣ್ ಕಷ್ಟಪಟ್ಟು ಕೃಷಿ ಮಾಡಿಕೊಂಡಿದ್ದ. ಮಾನಸಿಕ ಖಿನ್ನತೆಯಿಂದ ಕ್ಷುಲ್ಲಕ ಕಾರಣಕ್ಕೆ ಲಕ್ಷ್ಮಣ್ ಬಂದೂಕಿನಿಂದ ತಾನು ಹೆತ್ತ ಮಗನ ಮೇಲೆಯೇ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.