ಬೆಂಗಳೂರು, ಆ. 11 (DaijiworldNews/SM): ಕೆಲವು ದಿನಗಳಿಂದ ಖಾತೆ ಬದಲಾವಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸಚಿವ ಆನಂದ್ ಸಿಂಗ್ ಅವರಿಗೆ ದೆಹಲಿ ನಾಯಕರನ್ನು ಭೇಟಿಯಾಗಲು ಸಿಎಂ ಬಸವರಾಜ್ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ಸಿಎಂ ಪ್ರತಿಕ್ರಿಯೆ ನೀಡಿದ್ದು, ದೆಹಲಿಗೆ ಹೋಗಿ ಹಿರಿಯರ ಜೊತೆ ಮಾತನಾಡಿ. ದೆಹಲಿಯಲ್ಲಿ ರಾಜ್ಯದ ಉಸ್ತುವಾರಿ ಇದ್ದಾರೆ. ರಾಷ್ಟ್ರೀಯ ನಾಯಕರಿದ್ದಾರೆ. ಅಧಿಕಾರ ಬದಲಾವಣೆ ಸಂದರ್ಭ ಬಂದ ಉಸ್ತುವಾರಿಗಳಿದ್ದಾರೆ. ಖಾತೆ ಬದಲಾವಣೆ ಬಗ್ಗೆ ಮಾತನಾಡುವುದಿದ್ದರೆ, ಕೇಂದ್ರದ ನಾಯಕರ ಜೊತೆ ಮಾತನಾಡಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಸಲಹೆ ನೀಡಿದ್ದಾರೆ.