ಬೆಂಗಳೂರು, ಆ.11 (DaijiworldNews/HR): "ಸಚಿವ ಆನಂದ್ ಸಿಂಗ್ ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ" ಎಂದು ಸಚಿವ ಆರ್. ಅಶೋಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಖ್ಯಮಂತ್ರಿ ಬೊಮ್ಮಾಯಿಯೊಂದಿಗೆ ನಾವೆಲ್ಲಾ ಮಂಗಳವಾರ ಮಾತಾಡಿದ್ದು, ಆನಂದ್ ಸಿಂಗ್ ಶಾಂತವಾಗಿದ್ದಾರೆ. ಅವರನ್ನು ಮುಖ್ಯಮಂತ್ರಿ ಮತ್ತೆ ಭೇಟಿ ಮಾಡಲಿದ್ದಾರೆ" ಎಂದರು.
ಇನ್ನು ಸಚಿವ ಸಂಪುಟದಲ್ಲಿ ಆನಂದ್ ಸಿಂಗ್ ಮುಂದುವರೆಯುತ್ತಾರೆ. ಅಸಮಾಧಾನ ಇದ್ದರೆ ಸಮಸ್ಯೆಯನ್ನು ಮುಖ್ಯಮಂತ್ರಿ ಬಗೆಹರಿಸುತ್ತಾರೆ. ಆನಂದ್ ಸಿಂಗ್ ನನ್ನ ಆತ್ಮೀಯ ಸ್ನೇಹಿತ. ಆನಂದ್ ಸಿಂಗ್, ರಾಜೂಗೌಡ ಅವರು ಮುಖ್ಯಮಂತ್ರಿಯನ್ನು ಭೇಟಿ ಮಾಡಲಿದ್ದಾರೆ. ಅವರಿಗೂ ಯಾವುದೇ ಅಸಮಾಧಾನ ಇಲ್ಲ" ಎಂದಿದ್ದಾರೆ.