ಬೆಂಗಳೂರು, ಆ.11 (DaijiworldNews/HR): ಸಚಿವ ಆನಂದ್ ಸಿಂಗ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ನೀಡಿರುವ ಸಚಿವ ಸ್ಥಾನದಿಂದ ಅಸಮಾಧಾನಗೊಂಡಿದ್ದು, ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಇತ್ತ ಆನಂದ್ ಸಿಂಗ್ ಇಂದು ಬೆಳಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ದೂರವಾಣಿ ಕರೆ ಮಾಡಿ, ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ದಿಢೀರ್ ಬೆಳವಣಿಗೆ ಎಂಬಂತೆ ಸಚಿವ ಆನಂದ್ ಸಿಂಗ್ ಇಂದು ಬೆಳಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ದೂರವಾಣಿ ಕರೆ ಮಾಡಿ, ಚರ್ಚೆ ನಡೆಸಿದ್ದು, ಸದ್ಯ ಶಿರಸಿಯಲ್ಲಿರುವುದಾಗಿ ಸ್ಪೀಕರ್ ಕಾಗೇರಿ ತಿಳಿಸಿದ್ದಾರೆ. ಶುಕ್ರವಾರ ಬೆಂಗಳೂರಿಗೆ ಬರುವುದಾಗಿ ಸ್ಪೀಕರ್ ಕಾಗೇರಿ, ಆನಂದ್ ಸಿಂಗ್ಗೆ ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.
ಇನ್ನು ಸಂಜೆ ನಾಲ್ಕು ಗಂಟೆ ಸುಮಾರಿಗೆ ಬೆಂಗಳೂರಿಗೆ ಆಗಮಿಸಲಿರುವ ಸಚಿವ ಆನಂದ್ ಸಿಂಗ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರುಗಳನ್ನು ಇಂದು ಭೇಟಿಯಾಗಲಿದ್ದು, ಮೊದಲು ಮುಖ್ಯಮಂತ್ರಿ ಬೊಮ್ಮಾಯಿಯ ಭೇಟಿ ಮಾಡಿ, ಬಳಿಕ ಬಿಎಸ್ವೈ ಭೇಟಿ ಮಾಡಲಿರುವುದಾಗಿ ಸಚಿವ ಆನಂದ್ ಸಿಂಗ್ ಆಪ್ತ ಮೂಲಗಳು ತಿಳಿಸಿವೆ.
ರಾಜೀನಾಮೆಯ ಕುರಿತು ಪ್ರತಿಕ್ರಿಯಿಸಿದ ಆನಂದ್ ಸಿಂಗ್, "ನನ್ನ ರಾಜಕೀಯ ಜೀವನ ಆರಂಭಗೊಂಡಿದ್ದೇ ಈ ಗೋಪಾಲಕೃಷ್ಣನ ಸನ್ನಿಧಾನದಿಂದಾಗಿದೆ. ನಾನು ಏನ್ ಹೇಳಿದ್ದೆನೋ ಆ ಮಾತಿಗೆ ಬದ್ಧನಾಗಿದ್ದೇನೆ. ಇಂದು ಅಥವಾ ನಾಳೆ ಮುಖ್ಯಮಂತ್ರಿ ಭೇಟಿಯಾಗಲು ತೆರಳುತ್ತಿದ್ದೇನೆ. ಆ ನಂತ್ರ ನನ್ನ ರಾಜಕೀಯ ಜೀವನ ಅಂತ್ಯವೋ, ಆರಂಭವೋ ಎನ್ನುವ ಬಗ್ಗೆ ನಿರ್ಧಾರವಾಗಲಿದೆ" ಎಂದು
ಇನ್ನು "ಅರಣ್ಯ ಖಾತೆ ನೀಡುವಂತೆ ಪಟ್ಟು ಹಿಡಿದಿರುವ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಈ ರಾಜ್ಯದ ಅತಿ ದೊಡ್ಡ ರಾಜಕಾರಣಿ ನಾನಲ್ಲ. ಮಾಧ್ಯಮಗಳ ನಿರೀಕ್ಷೆಯಂತೆ ಹೇಳಿಕೆ ನೀಡಲ್ಲ ಎಂದು 7ನೇ ತಾರೀಖಿನಂದೆ ಬಳ್ಳಾರಿಯಲ್ಲಿ ಪ್ರತಿಕ್ರಿಯೆ ನೀಡಿದ್ದೇನೆ. ನಾನು ಬ್ಲಾಕ್ಮೇಲ್ ತಂತ್ರ ಮಾಡುವುದಿಲ್ಲ. ನೇರವಾಗಿ ಕೇಳುತ್ತೇನೆ, ತಪ್ಪಿದ್ದರೆ ತಿದ್ದಿಕೊಳ್ಳುತ್ತೇನೆ. ಪಕ್ಷಕ್ಕೆ, ನಾಯಕರಿಗೆ ಮುಜುಗರವಾಗುವಂತೆ ನಡೆದುಕೊಂಡಿಲ್ಲ" ಎಂದು ಹೇಳಿದ್ದಾರೆ.