ನವದೆಹಲಿ, ಆ 11 (DaijiworldNews/MS): ದೆಹಲಿಯಲ್ಲಿ ಅತ್ಯಾಚಾರಕ್ಕೆ ಒಳಗಾದ 9 ವರ್ಷದ ಬಾಲಕಿಯ ಪೋಷಕರ ಫೋಟೋವನ್ನು ಹಂಚಿಕೊಂಡು ಸಂತ್ರಸ್ತೆಯ ಕುರಿತ ಮಾಹಿತಿಯನ್ನು ಬಹಿರಂಗ ಪಡಿಸುವ ಮೂಲಕ ತಮ್ಮ ನೀತಿಯನ್ನು ಉಲ್ಲಂಘಿಸಿದೆ ಎಂದು ಟ್ವಿಟರ್ ದೆಹಲಿ ಹೈಕೋರ್ಟ್ ಗೆ ಆ.11 ರ ಬುಧವಾರ ತಿಳಿಸಿದೆ.
ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿದ್ದ ಬಾಲಕಿಯ ಮನೆಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಆಕೆಯ ಪೋಷಕರಿಗೆ ಸಾಂತ್ವಾನ ಹೇಳಿದ್ದರು. 'ನ್ಯಾಯ ಸಿಗುವವರೆಗೂ ಬಾಲಕಿಯ ಕುಟುಂಬದವರ ಜತೆಗೆ ಇರುತ್ತೇನೆ' ಎಂದು ಬರೆದುಕೊಂಡು ಬಾಲಕಿಯ ಕುಟುಂಬಾ ಪೋಟೋ ಟ್ವೀಟರ್ ನಲ್ಲಿ ಹಾಕಿದ್ದರು. ಸಂತ್ರಸ್ತ ಕುಟುಂಬದ ಮಾಹಿತಿ ಬಿಟ್ಟುಕೊಟ್ಟ ಹಿನ್ನಲೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್) ಟ್ವೀಟರ್ ನೋಟೀಸ್ ಜಾರಿ ಮಾಡಿತ್ತು. ಇದರಂತೆ ಕ್ರಮ ಕೈಗೊಂಡಿದ್ದ ಟ್ವಿಟ್ಟರ್, ರಾಹುಲ್ ಗಾಂಧಿ ಪ್ರಕಟಿಸಿದ್ದ ಪೋಸ್ಟ್ ಅನ್ನು ಅಳಿಸಿ ಹಾಕಿತ್ತು.
ಇದಲ್ಲದೆ ಗುರುತನ್ನು ಬಹಿರಂಗಪಡಿಸಿದ್ದ ವಿಚಾರವಾಗಿ ರಾಹುಲ್ ಗಾಂಧಿ ಮೇಲೆ ಕ್ರಮ ತೆಗೆದುಕೊಳ್ಳಲು ಮಕ್ಕಳ ಆಯೋಗ ಮತ್ತು ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ದಿಲ್ಲಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್ ರಾಹುಲ್ ಗಾಂಧಿ ಅವರ ಟ್ವೀಟ್ ತನ್ನ ನೀತಿಯನ್ನು ಉಲ್ಲಂಘಿಸಿದೆ ಎಂದು ಈ ಅರ್ಜಿ ವಿಚಾರಣೆ ವೇಳೆ ಟ್ವಿಟ್ಟರ್ ತಿಳಿಸಿದೆ.