ನವದೆಹಲಿ, ಆ.11 (DaijiworldNews/HR): ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಸದನದಲ್ಲಿ ಭುಗಿಲೆದ್ದ ಗದ್ದಲವನ್ನು ಖಂಡಿಸಿದ ಸಂದರ್ಭದಲ್ಲಿ ಭಾವುಕರಾಗಿದ್ದು, ಸಂಸದರ ವರ್ತನೆಯ ಬಗ್ಗೆಯೂ ನಾಯ್ಡು ದುಃಖ ವ್ಯಕ್ತಪಡಿಸಿದ್ದಾರೆ.
ಕೆಲವು ವಿರೋಧ ಪಕ್ಷದ ಸಂಸತ್ ಸದಸ್ಯರು ಮೇಜಿನ ಮೇಲೆ ಹತ್ತಿದ ಬಗ್ಗೆ 'ತೀವ್ರ ದುಃಖ' ವ್ಯಕ್ತಪಡಿಸಿದ ವೆಂಕಯ್ಯ ನಾಯ್ಡು, "ನಾನು ತುಂಬಾ ದುಃಖಿತನಾಗಿದ್ದೆ. ನಿದ್ರೆಯಿಲ್ಲದ ರಾತ್ರಿಯನ್ನು ಕಳೆದಿರುವುದರಿಂದ ನನ್ನ ದುಃಖವನ್ನು ತಿಳಿಸಲು ಸಾಧ್ಯವಾಗುತ್ತಿಲ್ಲ" ಎಂದರು.
ಇನ್ನು ಸಂಸತ್ ಸದಸ್ಯರು ಸಂಸದೀಯ ಸಿಬ್ಬಂದಿ ಕುಳಿತಿರುವ ಮೇಜಿನ ಮೇಲೆ ನಿಂತಿದ್ದು, ಇತರರು ಅದರ ಸುತ್ತಲೂ ಕಿಕ್ಕಿರಿದು ಸರ್ಕಾರಿ ವಿರೋಧಿ ಘೋಷಣೆಗಳನ್ನು ಕೂಗಿದರು. ಇದಲ್ಲದೆ, ಕೆಲವು ಸದಸ್ಯರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಮೇಜುಗಳ ಮೇಲೆ ಕುಳಿತಿದ್ದರಿಂದ ಕಲಾಪಗಳನ್ನು ಅನೇಕ ಬಾರಿ ಮುಂದೂಡಲಾಯಿತು.