ನವದೆಹಲಿ,ಆ 11 (DaijiworldNews/MS): ಒಂದೊಮ್ಮೆ ಲಸಿಕೆಗಳ ಡೋಸ್ಗಳನ್ನು ಮಿಶ್ರಣ ಮಾಡಿದರೆ ಸುರಕ್ಷತೆ, ಪರಿಣಾಮಿಕಾರಿತ್ವ, ಪ್ರತಿರಕ್ಷಣಾ ಪ್ರತಿಕ್ರಿಯೆಗಳು ಏನಾಗಲಿವೆ ಅಧ್ಯಯನ ನಡೆಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಅನುಮೋದನೆ ನೀಡಿದೆ.
ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ಡೋಸ್ಗಳ ಮಿಶ್ರಣ ಕುರಿತ ಅಧ್ಯಯನಕ್ಕೆ ತಮಿಳುನಾಡಿನ ವೆಲ್ಲೂರಿನ ಸಿಎಮ್ಸಿ ಆಸ್ಪತ್ರೆಗೆ ಲಸಿಕೆಗಳ ಡೋಸ್ ಮಿಶ್ರಣ ಕುರಿತು ಅಧ್ಯಯನಕ್ಕೆ ಅನುಮತಿ ನೀಡಲಾಗಿದೆ
ಈಗಾಗಲೇ ಬ್ರಿಟನ್ ಮತ್ತು ಸ್ಪೇನ್ನಲ್ಲಿ ಈ ಸಂಬಂಧ ಅಧ್ಯಯನಗಳು ನಡೆದಿವೆ. ಈ ಅಧ್ಯಯನಗಳಲ್ಲಿ ಫೈಜರ್ ಮತ್ತು ಆಸ್ಟ್ರಾಝೆನಿಕಾದ (ಕೋವಿಶೀಲ್ಡ್) ಲಸಿಕೆಗಳನ್ನು ಮಿಶ್ರಣ ಮಾಡಿದಾಗ ಸುರಕ್ಷಿತ ಮತ್ತು ಪ್ರತಿರಕ್ಷಣಾ ಪ್ರತಿಕ್ರಿಯೆಗಳು ಸರಿಯಾಗಿವೆ ಎಂಬುದನ್ನು ಕಂಡುಕೊಳ್ಳಲಾಗಿದೆ.
ಜುಲೈ 29ರಂದು ಭಾರತದ ಕೇಂದ್ರೀಯ ಔಷಧ ಪ್ರಾಧಿಕಾರದ ತಜ್ಞರ ಸಮಿತಿಯು (ಸಿಡಿಎಸ್ಸಿಒ) ವೆಲ್ಲೂರು ಸಂಸ್ಥೆಗೆ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ಮಿಶ್ರಣದ ವೈದ್ಯಕೀಯ ಪ್ರಯೋಗದ ಕುರಿತು ಅಧ್ಯಯನ ನಡೆಸಲು ಅನುಮತಿ ನೀಡುವಂತೆ ಶಿಫಾರಸು ಮಾಡಿತ್ತು.
ಒಟ್ಟಾರೆ ಲಸಿಕೆ ಮಿಶ್ರಣ ಅಧ್ಯಯನ ವು ಕೊರೊನಾ ವೈರಸ್ ವಿರುದ್ಧ ಭಾರತದ ಹೋರಾಟದಲ್ಲಿ ಮಹತ್ವದ ಹೆಜ್ಜೆಯಾಗಿದೆ.