ತೆಲಂಗಾಣ, ಆ 11 (DaijiworldNews/MS): ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಾಜಿ ಜಿಲ್ಲಾ ಉಪಾಧ್ಯಕ್ಷ ಮತ್ತು ಉದ್ಯಮಿ, ವಿ.ಶ್ರೀನಿವಾಸ ಪ್ರಸಾದ ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಮಂಗಳವಾರ ಅವರದೇ ಕಾರಿನಲ್ಲಿ ಸುಟ್ಟಹೋದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ದುಷ್ಕರ್ಮಿಗಳು ಶ್ರೀನಿವಾಸ್ ಅವರನ್ನು ಕಾರಿನಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. "ಕಾರು ಹೊತ್ತಿ ಉರಿಯುತ್ತಿರುಅ ಬಗ್ಗೆ ಮಾಹಿತಿ ಪಡೆದ ನಂತರ ಅಲ್ಲಿಗೆ ತೆರಳಿದಾಗ, ಶ್ರೀನಿವಾಸ್ ಮೃತದೇಹ ಕಾರಿನ ಟ್ರಂಕ್ ನಲ್ಲಿ ಬಿದ್ದಿರುವುದನ್ನು ನಾವು ಗಮನಿಸಿದ್ದೇವೆ. ಆರೋಪಿಗಳು ಶ್ರೀನಿವಾಸ್ ಅವರ ಕಾರಿಗೆ ಬೆಂಕಿ ಹಚ್ಚಿದ್ದಾರೆ" ಎಂದು ಐಪಿಎಸ್ ಚಂದನಾ ದೀಪ್ತಿ ಹೇಳಿದ್ದಾರೆ.
ಶ್ರೀನಿವಾಸ್ ಮೃತದೇಹವನ್ನು ಪೋಸ್ಟ್ಮಾರ್ಟಮ್ಗೆಂದು ಸ್ಥಳೀಯ ಆಸ್ಪತ್ರೆಗೆ ತೆಗೆದುಕೊಂಡುಹೋಗಲಾಗಿದೆ. ಐಪಿಸಿ 302ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದೂ ಹೇಳಿದ್ದಾರೆ. ಘಟನೆ ಬಗ್ಗೆ ಇನ್ನಷ್ಟು ಮಾಹಿತಿ ಶೀಘ್ರವೇ ಬರಲಿದೆ.