ಶ್ರೀನಗರ, ಆ 10 (DaijiworldNews/MS): ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಬೇಕು ಹಾಗೂ ರಾಜ್ಯದ ಸ್ಥಾನಮಾನ ದೊರಕಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರವನ್ನು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಶ್ರೀನಗರದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ನಾವು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯತ್ವವನ್ನು ಮರುಸ್ಥಾಪಿಸಬೇಕು ಮತ್ತು ಇಲ್ಲಿನ ಪ್ರಜಾಪ್ರಭುತ್ವ ಪ್ರಕ್ರಿಯೆಯ ಪುನರುಜ್ಜೀವನವನ್ನು ಬಯಸುತ್ತೇವೆ ಎಂದು ಹೇಳಿದರು.
ರಾಹುಲ್ ಗಾಂಧಿ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಎರಡು ದಿನಗಳ ಪ್ರವಾಸದಲ್ಲಿದ್ದು ಶ್ರೀನಗರದಲ್ಲಿ ಹೊಸ ಪಕ್ಷದ ಕಚೇರಿಯನ್ನು ಉದ್ಘಾಟಿಸಿದರು. "ನನ್ನ ಕುಟುಂಬವು ಅಲಹಾಬಾದ್ನಲ್ಲಿ ವಾಸಿಸುತ್ತಿತ್ತು. ನಾನು ಇಲ್ಲಿ ಹೆಚ್ಚು ಇರಲಿಲ್ಲಆದರೆ ನಾನು ನಿಮ್ಮನ್ನು ಸ್ವಲ್ಪ ಅರ್ಥಮಾಡಿಕೊಂಡಿದ್ದೇನೆ. ನನ್ನೊಳಗೆ ಸ್ವಲ್ಪ ಕಾಶ್ಮೀರಿಯತ್ ಇದೆ" ಎಂದು ಗಾಂಧಿ ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಜನರ ಶಕ್ತಿ ಎಂದರೆ ಸಹೋದರತ್ವ ಮತ್ತು ಅವರ ಜೀವನ ವಿಧಾನ ಮತ್ತು ದ್ವೇಷವನ್ನು ಹರಡುವ ಯಾರನ್ನೂ ಇಲ್ಲಿ ಜನರು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಅವರು ಹೇಳಿದರು.