ಬೆಂಗಳೂರು, ಆ 10 (DaijiworldNews/PY): "ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ರೀತಿಯಾದ ಚರ್ಚೆಯಾಗಿಲ್ಲ" ಎಂದು ಕಂದಾಯ ಸಚವ ಆರ್. ಅಶೋಕ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಾಜಪೇಯಿ ಅವರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿಗರಿಗೆ ಇಲ್ಲ. ಇದು ಬಿಜೆಪಿ ಸರ್ಕಾರ. ಯಾವುದೇ ಸರ್ಕಾರ ಬಂದರೂ ವ್ಯಕ್ತಿಯ ಹೆಸರಿಎಉವ ಪದ್ದತಿಯನ್ನು ಬಿಟ್ಟು ಸಿಎಂ ಅಥವಾ ಪ್ರಧಾನ ಮಂತ್ರಿ ಯೋಜನೆ ಎಂದು ಹೆಸರಿಟ್ಟರೆ ಯಾವುದೇ ಸರ್ಕಾರ ಸಿಎಂ ಬಂದರೂ ಇದು ಮುಂದುವರಿಯುತ್ತದೆ" ಎಂದು ಹೇಳಿದರು.
"ಸಿಎಂ ಬುಧವಾರ ಮಂಗಳೂರು ಪ್ರವಾಸ ಕೈಗೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳಿಗೆ ತಾತ್ಕಾಲಿಕವಾಗಿ ಬೆಡ್ಗಳನ್ನು ವಾಪಾಸ್ಸು ನೀಡಲಾಗಿದೆ. ಅಗತ್ಯವಿದ್ದಲ್ಲಿ ಬೆಡ್ಗಳನ್ನು ವಾಪಾಸ್ಸು ಪಡೆದುಕೊಳ್ಳುತ್ತೇವೆ. ಅದನ್ನು ನಮ್ಮ ಆದೇಶದಲ್ಲಿಯೇ ತಿಳಿಸಿದ್ದೇವೆ" ಎಂದಿದ್ದಾರೆ.
"ಸಾಲು ಸಾಲು ಹಬ್ಬಗಳು ಬರುತ್ತಿವೆ. ಅಮೇರಿಕಾದಲ್ಲಿ ಕೊರೊನಾ ಮೂರನೇ ಅಲೆಯ ಕಾರಣ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಹಾಗಾಗಿ ರಾಜ್ಯದಲ್ಲೂ ಅನೇಕ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ರಾಜ್ಯದಲ್ಲಿ ಕಾಣಿಸದಂತೆ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಹೇಳಿದ್ದಾರೆ.
"ಸಚಿವರು ಕೂಡಾ ಕಡ್ಡಾಯವಾಗಿ ಕೊರೊನಾ ನಿಯಮಗಳನ್ನು ಪಾಲಿಸಬೇಕು. ಯಾರು ನಿಯಮ ಮೀರಬಾರದು ಎಂದು ಸ್ವಾಂತಂತ್ರ್ಯ ದಿನಾಚರಣೆಯನ್ನು ಕೊರೊನಾ ನಿಯಮದಂತೆ ಆಚರಿಸಲು ನಿರ್ಧರಿಸಲಾಗಿದೆ" ಎಂದು ತಿಳಿಸಿದ್ದಾರೆ.