ಬೆಂಗಳೂರು, ಆ 10 (DaijiworldNews/PY): "ಆಯಾ ರಾಜ್ಯದ ಹೈಕೋರ್ಟ್ನ ಅನುಮತಿ ಇಲ್ಲದೇ, ಸಂಸದರು ಹಾಗೂ ಶಾಸಕರ ವಿರುದ್ದ ದಾಖಲಾಗಿರುವ ಕ್ರಿಮಿನಲ್ ಕೇಸ್ಗಳನ್ನು ಹಿಂಪಡೆಯಲು ಸಾಧ್ಯವಿಲ್ಲ" ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
"ವಿಶೇಷ ನ್ಯಾಯಾಲಯಗಳಲ್ಲಿ ಸಂಸದರು ಹಾಗೂ ಶಾಸಕರ ವಿರುದ್ದದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಸುಪ್ರೀಂ ಕೋರ್ಟ್ನ ಮುಂದಿನ ಆದೇಶದವರೆಗೆ ತಮ್ಮ ಪ್ರಸ್ತುತ ಹುದ್ದೆಯಲ್ಲಿ ಮುಂದಿವರಿಯಬೇಕು" ಎಂದು ಹೇಳಿದೆ.
ಈ ಬಗ್ಗೆ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ, ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ. ವಿನೀತ್ ಸರಣ್ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠ ಇಂದು ಈ ತೀರ್ಪು ಪ್ರಕಟಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಸಂಸದರು ಹಾಗೂ ಶಾಸಕರ ವಿರುದ್ದದ ಕೇಸ್ಗಳ ಮಾಹಿತಿಯನ್ನು ನೀಡುವಂತೆ ಸುಪ್ರೀಂ ಕೋರ್ಟ್ ಹೈಕೋರ್ಟ್ನ ರಿಜಿಸ್ಟ್ರಾರ್ಗಳಿಗೆ ಆದೇಶ ನೀಡಿದೆ.
"ಸುಪ್ರೀಂ ಕೋರ್ಟ್, ಕೇರಳ ಸರ್ಕಾರ ಹಾಗೂ ಕೆ ಅಜಿತ್ ಪ್ರಕರಣದಲ್ಲಿ ನೀಡಿದ ತೀರ್ಪಿನ ನಂತರ 2020ರ ಸೆಪ್ಟೆಂಬರ್ 16ರಿಂದ ಸಂಸದರು ಹಾಗೂ ಶಾಸಕರ ವಿರುದ್ದದ ಪ್ರಕರಣಗಳನ್ನು ಹಿಂಪಡೆಯುವ ವಿಚಾರದ ಬಗ್ಗೆ ಪರಿಶೀಲಿಸುವಂತೆ ಹೈಕೋರ್ಟ್ಗಳು ಮನವಿ ಮಾಡಿದ್ದವು. ಅದರನ್ವಯ ಇದೀ ಆದೇಶ ನೀಡಲಾಗಿದೆ" ಎಂದು ಸುಪ್ರೀಂ ಹೇಳಿದೆ.