ಲಖನೌ, ಆ.10(DaijiworldNews/HR): ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್)ಗೆ ಸ್ವಾತಂತ್ರ್ಯ ಹೋರಾಟದ ವಿಚಾರವಾಗಿ ಮಾಡುವುದಕ್ಕೆ ಏನೂ ಇಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.
1925ರ ಕಾಕೋರಿ ರೈಲು ದರೋಡೆಯ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಸಂಬಂಧಿಸಿ ಎಸ್ಪಿ ಮುಖ್ಯಸ್ಥ ಅಖಿಲೇಶ್ ಈ ಹೇಳಿಕೆ ನೀಡಿದ್ದು, ಈ ಕಾರ್ಯಕ್ರಮವು ಸಿಎಂ ಯೋಗಿ ಆದಿತ್ಯಾನಾಥ್ ಸರ್ಕಾರದ 'ಡೋಂಗಿತನ' ಎಂದು ಅಖಿಲೇಶ್ ಹೇಳಿದ್ದಾರೆ.
1925, ಆಗಸ್ಟ್ 9ರಂದು ಬ್ರಿಟಿಷರ ವಿರುದ್ಧದ ದಂಗೆಯ ಭಾಗವಾಗಿ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳು ಉತ್ತರ ಪ್ರದೇಶದ ಕಾಕೋರಿ ಮೂಲಕ ಹಾದು ಹೋಗುವ ರೈಲಿನಲ್ಲಿ ಬ್ರಿಟಿಷ್ ಸರ್ಕಾರದ ನಿಧಿಯನ್ನು ದೋಚಿದ್ದರು.
ಇನ್ನು ಹುತಾತ್ಮ ಯೋಧನ ಕುಟುಂಬಕ್ಕೆ ಘೋಷಣೆ ಮಾಡಿದ್ದ ಆಶ್ವಾಸನೆ ಈಡೇರಿಸುವಂತೆ ಕೋರಿ ಪತ್ನಿ ಮತ್ತು ಮಗ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಪ್ರಯತ್ನಸಿದ್ದು, ಅವರನ್ನು ಅವಮಾನಿಸಿ, ಹೊರಗೆ ಕಳುಹಿಸಲಾಗಿದೆ. ಬಿಜೆಪಿಯಲ್ಲಿರುವ ಜನರಿಗೆ ಹುತಾತ್ಮರನ್ನು ಗೌರವಿಸುವುದು ಹೇಗೆ ತಿಳಿದಿರಲು ಸಾದ್ಯ? ಬ್ರಿಟಿಷರಂತೆ ಬಿಜೆಪಿ ಸಮಾಜದ ಭಾವೈಕ್ಯತೆ ವಿರುದ್ಧ ಕೆಲಸ ಮಾಡುತ್ತಿದೆ" ಎಂದು ಆರೋಪಿಸಿದ್ದಾರೆ.