ಬೆಂಗಳೂರು, ಆ.10(DaijiworldNews/HR): ಸಿನಿಮಾ ಶೂಟಿಂಗ್ ವೇಳೆ ಅನೇಕ ಅವಘಡಗಳು ಸಂಬಂವಿಸುತ್ತಿದ್ದು, ಕೆಲವು ನಿಯಮಗಳು ಇವೆ, ಆದರೆ ಅದನ್ನು ಅನುಸರಿಸಿ ಚಿತ್ರೀಕರಣ ಮಾಡುತ್ತಿಲ್ಲ. ಹಾಗಾಗಿ ಅನುಮತಿ ಪಡೆದುಕೊಂಡೇ ಚಿತ್ರೀಕರಣ ಮಾಡಬೇಕು. ಈ ನಿಟ್ಟಿನಲ್ಲಿ ಇನ್ನರೆಡು ದಿನಗಳಲ್ಲಿ ಹೊಸ ಆದೇಶ ಹೊರಡಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಚಿತ್ರೀಕರಣದ ವೇಳೆ ಕೆಲವರು ನಿಯಮಗಳನ್ನು ಪಾಲಿಸುತ್ತಿಲ್ಲ. ಹಾಗಾಗಿಯೇ ಇಂತಹ ಅನೇಕ ಅವಘಡಗಳು ಮತ್ತೆ ಮತ್ತೆ ಸಂಭವಿಸುತ್ತಿರುವುದರಿಂದ ಇನ್ನು ಮುಂದೆ ಚಿತ್ರೀಕರಣದ ವೇಳೆ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಲಾಗುವುದು" ಎಂದರು.
ಇನ್ನು "ಒಂದೆರಡು ದಿನಗಳಲ್ಲಿ ಕಠಿಣ ನಿಯಮಗಳ ಬಗ್ಗೆ ಆದೇಶ ಹೊರಡಿಸಲಾಗುವುದು. ಇನ್ಮುಂದೆ ಶೂಟಿಂಗ್ ವೇಳೆ ಮುಂಜಾಗೃತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು" ಎಂದು ಹೇಳಿದ್ದಾರೆ.