ಭರೂಚ್, ಆ.10(DaijiworldNews/HR): ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರಿಗೆ ದೇಶದಾದ್ಯಂತ ಪ್ರಶಂಸೆ, ಅಭಿನಂದನೆ ಮತ್ತು ಬಹುಮಾನಗಳು ಹರಿದುಬರುತ್ತಿದ್ದು, ಇದೀಗ ಗುಜರಾತಿನ ಭರೂಚ್ನಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕ ಗ್ರಾಹಕರಿಗೆ ವಿಶೇಷ ಆಫರ್ ನೀಡುವುದಾಗಿ ಘೋಷಿಸಿದ್ದಾರೆ.
ಪೆಟ್ರೋಲ್ ಬಂಕ್ ಮಾಲೀಕ ಆಯುಬ್ ಪಠಾಣ್ ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾರ ಹೆಸರಿನವರಿಗೆ 500 ರೂ. ವರೆಗೆ ಉಚಿತ ಪೆಟ್ರೋಲ್ ನೀಡಲು ನಿರ್ಧರಿಸಿದ್ದಾರೆ.
ಭಾರತದ ಹೆಮ್ಮೆ ನೀರಜ್ ಚೋಪ್ರಾರನ್ನು ಗೌರವಿಸಲು ಇದು ನಮ್ಮ ಎರಡು ದಿನದ ಯೋಜನೆಯಾಗಿದ್ದು, ನೀರಜ್ ಚೋಪ್ರಾ ಅವರ ಹೆಸರನ್ನು ಹೊಂದಿರುವವರು ಯಾವುದೇ ಮಾನ್ಯ ಐಡಿ ಕಾರ್ಡ್ ತೋರಿಸಿದರೆ ಸಾಕು ಎಂದು ಪಠಾಣ್ ಹೇಳಿರುವುದಾಗಿ ವರದಿಯಾಗಿದೆ.