ಬೆಂಗಳೂರು, ಆ 09 (DaijiworldNews/MS): ಕರ್ನಾಟಕ ರಾಜ್ಯ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶವನ್ನು ನೂತನ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರಕಟಿಸಿದ್ದಾರೆ. ಈ ಬಾರಿ ಶೇ. 99.9 ಫಲಿತಾಂಶ ಬಂದಿದೆ. 1,28,931 ಮಂದಿ ಎ+ ಗ್ರೇಡ್ ನಲ್ಲಿ ಉತ್ತೀರ್ಣರಾಗಿದ್ದಾರೆ. ಬೇರೆಯವರು ಪರೀಕ್ಷೆ ಬರೆದ ಕಾರಣ ಓರ್ವ ವಿದ್ಯಾರ್ಥಿನಿಯನ್ನು ಹೊರತುಪಡಿಸಿ ಉಳಿದವರೆಲ್ಲರನ್ನೂ ಉತ್ತೀರ್ಣಗೊಳಿಸಲಾಗಿದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಸಚಿವರು ಫಲಿತಾಂಶದ ವಿವರವನ್ನು ಪ್ರಕಟಿಸಿದ್ದಾರೆ.
ಈ ವರ್ಷ 625 ಪೂರ್ಣ ಅಂಕಗಳನ್ನು 155 ಮಕ್ಕಳನ್ನು ಪಡೆದಿದ್ದಾರೆ. ಎ+ ಗ್ರೇಡ್ ಅನ್ನು 1,28,931 ವಿದ್ಯಾರ್ಥಿಗಳು ಪಡೆದಿದ್ದು, ಎ ಗ್ರೇಡ್ ಅನ್ನು 2,50,317 ವಿದ್ಯಾರ್ಥಿಗಳು ಪಡೆದಿದ್ದಾರೆ. ಬಿ ಗ್ರೇಡ್ ಅನ್ನು 2,87,684 ವಿದ್ಯಾರ್ಥಿಗಳು ಪಡೆದಿದ್ದಾರೆ. ಸಿ ಗ್ರೇಡ್ ಅನ್ನು 1,13,610 ವಿದ್ಯಾರ್ಥಿಗಳು ಆಗಿದ್ದಾರೆ.
623 ಅಂಕ ಪಡೆದಿರುವ 289 ವಿದ್ಯಾರ್ಥಿಗಳು, 622 ಅಂಕ ಪಡೆದಿರುವ ಇಬ್ಬರು ಹಾಗೂ 621 ಅಂಕ ಪಡೆದಿರುವ 449 ವಿದ್ಯಾರ್ಥಿಗಳು ಪಡೇದುಕೊಂಡಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ https://sslc.Karnataka.gov.in -kseeb.kar.nic.in-karresults.nic.in ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.
ಕೊರೊನಾ ಲಾಕ್ಡೌನ್ ಸಡಿಲಿಕೆಯಾಗುತ್ತಿದ್ದಂತೆ ಜೂನ್19 ಹಾಗೂ ಜೂನ್ 22ರಂದು ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿ 8.71 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡುವುದಾಗಿ ಈ ಹಿಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದರು.