ಮುಂಬೈ, ಆ.09 (DaijiworldNews/HR): ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರು ಬದಲಾವಣೆ ಜನರ ಇಚ್ಚೆಯಾಗಿಲ್ಲ, ಬದಲಾಗಿ ಇದು ಬಿಜೆಪಿ ರಾಜಕೀಯ ಆಟ ಎಂದು ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ.
ಸಾಂಧರ್ಭಿಕ ಚಿತ್ರ
ಈ ಕುರಿತು ತನ್ನ ಮುಖವಾಣಿ ಸಾಮ್ನಾದಲ್ಲಿ ಟೀಕಿಸಿರುವ ಶಿವಸೇನೆ, "ಕೇಂದ್ರ ಸರ್ಕಾರ ಇತ್ತೀಚೆಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಮೇಜರ್ ಧ್ಯಾನ್ಚಂದ್ ಖೇಲ್ ರತ್ನ ಎಂದು ಮರುನಾಮಕರಣ ಮಾಡಿದ್ದು,ಇದನ್ನು ಅಹಮದಾಬಾದ್ನ ಕ್ರಿಕೆಟ್ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಅವರ ಹೆಸರನ್ನು ಮರುನಾಮಕರಣ ಮಾಡಲಾಗಿದ್ದು, ಕ್ರಿಕೆಟ್ಗೆ ಮೋದಿ ಅವರ ಕೊಡುಗೆ ಏನಿತ್ತು" ಎಂದು ಪ್ರಶ್ನಿಸಿದೆ.
ಇನ್ನು "ಖೇಲ್ ರತ್ನ ಮರುನಾಮಕರಣದ ವೇಳೆ ಇದು ಜನರ ಆಶಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ ಅದು ರಾಜಕೀಯದಾಟವಷ್ಟೆ" ಎಂದು ಹೇಳಿದೆ.