ನವದೆಹಲಿ, ಆ 09 (DaijiworldNews/PY): "ಭಾರತದಿಂದ ಬಡತನ ಸೇರಿದಂತೆ, ಅನಕ್ಷರತೆ, ಅಸಮಾನತೆ, ಭ್ರಷ್ಟಾಚಾರ, ಜಾತೀಯತೆ, ಕೋಮುವಾದ ಹಾಗೂ ಲಿಂಗ ತಾರತಮ್ಯದಂತಹ ಸಾಮಾಜಿಕ ಪಿಡುಗುಗಳನ್ನು ತೊಡೆದುಹಾಕಲು ನಾವು ಶ್ರಮಿಸೋಣ" ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಬಡತನ ಸೇರಿದಂತೆ, ಅನಕ್ಷರತೆ, ಅಸಮಾನತೆ, ಭ್ರಷ್ಟಾಚಾರ, ಜಾತೀಯತೆ, ಕೋಮುವಾದ ಹಾಗೂ ಲಿಂಗ ತಾರತಮ್ಯದಂತಹ ಸಾಮಾಜಿಕ ಪಿಡುಗುಗಳನ್ನು ಭಾರತದಿಂದ ಹೋಗಲಾಡಿಲು ನಾವು ಶ್ರಮಿಸೋಣ. ಈ ಮೂಲಕ ಆತ್ಮನಿರ್ಭರ ಭಾರತ ನಿರ್ಮಾಣ ಮಾಡುವಲ್ಲಿ ನಾವು ಒಟ್ಟಾಗಿ ಹೆಜ್ಜೆ ಹಾಕೋಣ" ಎಂದಿದ್ದಾರೆ.
ಕ್ವಿಟ್ ಇಂಡಿಯಾ ಚಳವಳಿಯ (ಬ್ರಿಟಿಷರೇ ಭಾರತ ಬಿಟ್ಟು ತೊಲಗಿ) 79ನೇ ವಾರ್ಷಿಕೋತ್ಸವದ ನಿಮಿತ್ತ ಟ್ವೀಟ್ ಮಾಡಿರುವ ಅವರು, "ನಮ್ಮ ತಾಯ್ನಾಡನ್ನು ವಸಾಹತುಶಾಹಿ ಆಡಳಿತದಿಂದ ಮುಕ್ತಿಗೊಳಿಸುವ ಚಳುವಳಿಯಲ್ಲಿ ಭಾಗವಹಿಸಿದ ಭಾರತದ ವೀರ ಮಕ್ಕಳ ತ್ಯಾಗವನ್ನು ಸದಾ ನೆನಪಿಸಿಕೊಳ್ಳೋಣ" ಎಂದು ತಿಳಿಸಿದ್ದಾರೆ.