ಲಕ್ನೋ, ಆ.09 (DaijiworldNews/HR): 10 ವರ್ಷದ ಬಾಲಕನೊಬ್ಬ ತನ್ನ 12 ವರ್ಷದ ನೆರೆಮನೆಯ ಬಾಲಕನ ತಲೆಗೆ ಏರ್ಗನ್ನಿಂದ ಗುಂಡು ಹಾರಿಸಿದ ಪರಿಣಾಮ ಬಾಲಕ ಪಾರ್ಶ್ವವಾಯುವಿಗೆ ಒಳಗಾಗಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ನಡೆದಿದದು, ಪೊಲೀಸರು ಈ ಪ್ರಕರಣದಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಲಕ್ನೋದ ಅಪೊಲೊ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಗೆ ಒಳಗಾಗಿ ಹುಡುಗನಿಗೆ ನಾಲ್ಕು ದಿನಗಳ ಕಾಲ ವೆಂಟಿಲೇಟರ್ನಲ್ಲಿ ಇರಿಸಲಾಗಿದದು, ದೇಹದ ಎಡಭಾಗದಲ್ಲಿ ಪಾರ್ಶ್ವವಾಯುವಿಗೆ ಒಳಗಾಗಿರುವುದರಿಂದ ಬಾಲಕ ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಆರೋಪಿ ಹುಡುಗನ ವಿರುದ್ಧ ಎಫ್ ಐಆರ್ ದಾಖಲಿಸಿದ್ದೇನೆ ಎಂದು ಪಾರ್ಶ್ವವಾಯುವಿಗೆ ಒಳಗಾಗಿರುವ ಬಾಲಕನ ತಂದೆ ಅಭಯ್ ಹೇಳಿದರು.
ಇನ್ನು ಅಭಯ್ ತನ್ನ ಪೊಲೀಸ್ ದೂರಿನಲ್ಲಿ, "ತನ್ನ ಮಗ ಟೆರೇಸ್ ಮೇಲೆ ಆಟವಾಡುತ್ತಿದ್ದಾಗ ಅವನ ನೆರೆ ಮನೆಯವರ ಮಗ ತನ್ನ ಟೆರೇಸ್ ಮೇಲೆ ಬಂದಿದದು, ಇಬ್ಬರು ಮಕ್ಕಳ ನಡುವೆ ವಾಗ್ವಾದ ನಡೆದಿದದು, ಬಳಿಕ ಆರೋಪಿ ತನ್ನ ತಂದೆಯ ಏರ್ ಗನ್ ಎತ್ತಿಕೊಂಡು ತನ್ನ ಮಗನ ತಲೆಗೆ ಗುಂಡು ಹಾರಿಸಿದ್ದಾನೆ" ಎಂದು ತಿಳಿಸಿದ್ದಾರೆ.