ಅಮೃತಸರ , ಆ.09 (DaijiworldNews/HR): ಕಳ್ಳನೊಬ್ಬ ಹೌರಾ-ಅಮೃತಸರ ರೈಲೊಂದರಲ್ಲಿ ರೈಲ್ವೇ ಟಿಕೆಟ್ ಪರೀಕ್ಷಕರ (ಟಿಟಿಇ) ಕೈಬ್ಯಾಗ್ ಕದ್ದು ಅದರಲ್ಲಿದ್ದ ಸಮವಸ್ತ್ರ ಹಾಗೂ ಚಲನ್ ಪುಸ್ತಕ ಬಳಸಿಕೊಂಡು ಪ್ರಯಾಣಿಕರ ಟಿಕೆಟ್ ಪರಿಶೀಲನೆ ನಡೆಸಿ ಅವರಿಂದ ದಂಡದ ಹೆಸರಿನಲ್ಲಿ ದುಡ್ಡು ಕೀಳುತ್ತಿದ್ದ ಘಟನೆ ಬೆಳಕಿಗೆ ಬಂದಿದ್ದು, ಆತನನ್ನು ಬಂಧಿಸಲಾಗಿದೆ.
ಸಾಂಧರ್ಭಿಕ ಚಿತ್ರ
ಬಂಧಿತನನ್ನು ಉತ್ತರ ಪ್ರದೇಶದ ಶಹಜಾನ್ಪುರದ ಗೋವಿಂದ್ ಸಿಂಗ್ ಎಂದು ಗುರುತಿಸಲಾಗಿದೆ.
ಗೋವಿಂದ್ ಸಿಂಗ್ಬರೇಲಿ ನಿಲ್ದಾಣದಲ್ಲಿ ಟಿಟಿಇ ಕೈಬ್ಯಾಗ್ ಕದಿದ್ದು, ಬ್ಯಾಗಿನ ಮಾಲೀಕರಾದ ಜಸ್ವಂತ್ ಸಿಂಗ್ ಪೊಲೀಸರಿಗೆ ದೂರು ಕೊಟ್ಟ ಸ್ವಲ್ಪ ಹೊತ್ತಿನಲ್ಲೇ ಕಳ್ಳನನ್ನು ಹಿಡಿಯಲಾಗಿದೆ.
ಇನ್ನು ಕಳ್ಳನನ್ನು ಬಿಜ್ನೋರ್ ಬಳಿಕ ನಜೀಬಾಬಾದ್ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಗೋವಿಂದನ ಕೈಯಿಂದ ಚಲನ್ ಪುಸ್ತಕ ಹಾಗೂ ಬ್ಯಾಗಿನಲ್ಲಿದ್ದ ಇತರೆ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.