ಮಡಿಕೇರಿ, ಆ.09 (DaijiworldNews/HR): ಸಚಿವ ಸ್ಥಾನ ವಂಚಿತರಾಗಿರುವ ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮತ್ತೆ ಅಸಮಾಧಾನ ಹೊರ ಹಾಕಿದ್ದು, ಅರಣ್ಯವೇ ಇಲ್ಲದ ಜಿಲ್ಲೆಯವರನ್ನು ಅರಣ್ಯ ಮಂತ್ರಿ ಮಾಡಿದರೆ ಕೊಡಗಿನ ಸಮಸ್ಯೆ ಹೇಗೆ ಗೊತ್ತಾಗಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಮಡಿಕೇರಿ ತಾಲೂಕು ಮುಕ್ಕೋಡ್ಲುವಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ''ಅರಣ್ಯವೇ ಇಲ್ಲದ ಜಿಲ್ಲೆಯವರನ್ನು ಅರಣ್ಯ ಮಂತ್ರಿ ಮಾಡಿದರೆ ಕೊಡಗಿನ ಸಮಸ್ಯೆ ಹೇಗೆ ಗೊತ್ತಾಗಲು ಸಾಧ್ಯ?'' ಎಂದು ಪ್ರಶ್ನಿಸಿದ್ದಾರೆ.
ಇನ್ನು ಕೊಡಗಿನ ಸಮಸ್ಯೆಗಳ ಬಗ್ಗೆ ಕೆಲವು ಮಂತ್ರಿಗಳು ಖುದ್ದು ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ. ಆದರೆ ಇನ್ನೂ ಕೆಲವರು ಮಾತ್ರ ಸರಿಯಾದ ಮಾಹಿತಿಯೂ ಇಲ್ಲದೇ ಸ್ಥಳ ಪರಿಶೀಲನೆಯನ್ನೂ ಮಾಡದೇ ಕೂತ ಸ್ಥಳದಿಂದಲೇ ಮಾತನಾಡುತ್ತಾರೆ" ಎಂದಿದ್ದಾರೆ.
"ಕೊಡಗಿನ ಸಮಸ್ಯೆಗಳ ಬಗ್ಗೆ ತಿಳಿದಿರುವವರನ್ನೇ ಉಸ್ತುವಾರಿ ಸಚಿವರನ್ನಾಗಿ ಮಾಡಿ ಎಂದಿರುವ ರಂಜನ್, "ಸ್ಥಳೀಯರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಿದರೆ ಮಾತ್ರ ಸ್ಥಳೀಯ ಸಮಸ್ಯೆ ಅರಿಯಲು ಸಾಧ್ಯ" ಎಂದು ಹೇಳಿದ್ದಾರೆ.