ನವದೆಹಲಿ, ಆ 09 (DaijiworldNews/MS): ಬಾಲಿವುಡ್ ನ ಖ್ಯಾತ ನಟ 63 ವರ್ಷದ ಅನುಪಮ್ ಶ್ಯಾಮ್ ಅವರು ಆ.೦೮ ರ ತಡರಾತ್ರಿ ನಿಧನರಾಗಿದ್ದಾರೆ.
ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನುಕೆಲ ದಿನಗಳ ಹಿಂದೆ ಮುಂಬೈನ ಸಬ್ ಅರ್ಬನ್ ಗುರುಗ್ರಾಮದಲ್ಲಿರುವ ಲೈಫ್ ಲೈನ್ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.
ಇನ್ನು ನಟ ಅನುಪಮ್ ಶ್ಯಾಮ್ ಅವರ ನಿಧನಕ್ಕೆ ಹಿಂದಿ ಕಿರುತೆರೆ ನಟನಟಿಯರು ಕಂಬನಿ ಮಿಡಿದಿದೆ 'ಸತ್ಯ', 'ದಿಲ್ ಸೇ', 'ಲಗಾನ್' ಮೊದಲಾದ ಚಿತ್ರಗಳಲ್ಲಿ ಮನೋಜ್ಞ ಅಭಿನಯಿಸಿದ್ದರು.
ಇನ್ನು ನಟ ಅನುಪಮ್ ಶ್ಯಾಮ್ ಅನಾರೋಗ್ಯ ಸಮಸ್ಯೆಗಳನ್ನು ಹೊಂದಿದ್ದರು. ಚಿತ್ರೀಕರಣದ ಸಮಯದಲ್ಲಿ ಚಿಕಿತ್ಸೆ ಪಡೆದುಕೊಂಡು ಶೂಟಿಂಗ್ ಗೆ ಬರುತ್ತಿದ್ದರು ಎನ್ನಲಾಗಿದೆ.