ಬೆಂಗಳೂರು, ಆ. 08 (DaijiworldNews/SM): ಕೊರೋನಾ ಸೋಂಕಿತ ತಾಯಿ ಮಗುವಿಗೆ ಹಾಲುಣಿಸಿದರೆ ಯಾವುದೇ ತೊಂದರೆ ಇಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕೊರೋನಾ ಸೋಂಕು ವಕ್ಕರಿಸಿದ ಬಳಿಕ ಈ ವಿಚಾರದ ಬಗ್ಗೆ ಪರ ವಿರೋಧ ಚರ್ಚೆಗಳಾಗುತ್ತಿವೆ. ತಾಯಿ ಮಕ್ಕಳಿಗೆ ಯಾವ ರೀತಿಯಲ್ಲಿ ಪರಿಣಾಮವಾಗಲಿದೆ ಎಂದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಇದೀಗ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದ್ದು, ತಾಯಿಗೆ ಸೋಂಕು ತಗುಲಿದರೂ ಮಗುವಿಗೆ ಅಪಾಯವಿಲ್ಲ ಎಂದು ಹೇಳಿದ್ದು ಮಗುವಿಗೆ ಹಾಲುಣಿಸಿದರೂ ಹಾನಿಯೇನಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.