ನವದೆಹಲಿ,ಆ.08 (DaijiworldNews/HR): ಸುಪ್ರೀಂಕೋರ್ಟ್ ಹಾಗೂ ಆಂಧ್ರಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ಗಳನ್ನು ಮಾಡಿದ ಆರೋಪದ ಮೇಲೆ ಐವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಬಂಧಿತರನ್ನು ಪಟ್ಟಾಪು ಆದರ್ಶ, ಲವನೂರು ಸಾಂಬಶಿವರೆಡ್ಡಿ, ಧಾಮಿ ರೆಡ್ಡಿ, ಪಾಮುಲ ಸುಧೀರ್ ಹಾಗೂ ಲಿಂಗಾರೆಡ್ಡಿ ಎಂದು ಗುರುತಿದ್
ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ಕೃತ್ಯದಲ್ಲಿ ವೈಎಸ್ಆರ್ ಕಾಂಗ್ರೆಸ್ ಮುಖಂಡರಾದ ಲೋಕಸಭಾ ಸದಸ್ಯ ನಂದಿಗಂ ಸುರೇಶ್ ಹಾಗೂ ಅಮಂಚಿ ಕೃಷ್ಣಮೋಹನ್ ಅವರ ಪಾತ್ರವಿರುವ ಶಂಕೆ ಇರುವ ಕಾರಣ, ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.
ಇನ್ನು ಮತ್ತಷ್ಟು ತನಿಖೆಯಿಂದ ಪಿತೂರಿ ಏನೆಂಬುದು ಹೊರಬೀಳಲು ಸಾಧ್ಯ ಎಂದು ಸಿಬಿಐ ವಕ್ತಾರ ಆರ್.ಸಿ.ಜೋಶಿ ತಿಳಿಸಿದ್ದಾರೆ.