ಬೆಂಗಳೂರು, ಆ.08 (DaijiworldNews/HR): ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸಚಿವ ಸಂಪುಟ ದರ್ಜೆ ಸೌಲಭ್ಯವನ್ನು ವಾಪಸ್ ನೀಡಿ ಯಡಿಯೂರಪ್ಪ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಈ ಬಗ್ಗೆ ನಾನೇ ಯಡಿಯೂರಪ್ಪನವರಿಗೆ ಹೇಳೋಣ ಅಂದುಕೊಂಡಿದ್ದೆ. ನಾನು ಹೇಳುವ ಮೊದಲೇ ಯಡಿಯೂರಪ್ಪ ವಾಪಸ್ ಮಾಡಿದ್ದಾರೆ. ಅದು ಒಳ್ಳೆಯ ನಿರ್ಧಾರವಾಗಿದೆ. ಸಂಪುಟ ದರ್ಜೆ ಸ್ಥಾನವನ್ನು ಒಪ್ಪದೇ ಯಡಿಯೂರಪ್ಪ ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ" ಎಂದಿದ್ದಾರೆ.
ಇನ್ನು ಯಡಿಯೂರಪ್ಪ ಸಂಪುಟ ದರ್ಜೆ ಸ್ಥಾನವನ್ನು ನಿರಾಕರಿಸಿರುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರು ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.