ಬೆಂಗಳೂರು, ಆ 08 (DaijiworldNews/PY): "ದ್ವೇಷದ ರಾಯಭಾರಿಯಂತಿರುವ ಸಿ. ಟಿ ರವಿ ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಲು ಒತ್ತಾಯಿಸಿದ್ದಾರೆ" ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೂರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ದ್ವೇಷದ ರಾಯಭಾರಿಯಂತಿರುವ ಸಿ. ಟಿ ರವಿ ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಲು ಒತ್ತಾಯಿಸಿದ್ದಾರೆ. ಹೆಸರು ಬದಲಾದ ಮಾತ್ರಕ್ಕೆ ಬಡವರ ಹಸಿವು ನೀಗುವುದಾದರೆ ಅಭ್ಯಂತರವಿಲ್ಲ" ಎಂದಿದ್ದಾರೆ.
"ಇದೇ ಇಂದಿರಾ ಕ್ಯಾಂಟೀನ್ಗೆ ಸರ್ಕಾರ ಅನುದಾನ ತಡೆ ಹಿಡಿದಿದೆ. ರವಿಯವರೆ ಬದಲಾಗಬೇಕಿರುವುದು ಹೆಸರಲ್ಲ,ನಿಮ್ಮ ದುಷ್ಟ ಮನಸ್ಥಿತಿ" ಎಂದು ತಿಳಿಸಿದ್ದಾರೆ.
"ಕೇವಲ ಹೆಸರುಗಳನ್ನು ಬದಲಾಯಿಸುವ ದೇಶದ ಮನಃಸ್ಥಿತಿಯನ್ನು ಕೈಬಿಡಿ. ಬಡವರ ಹಸಿವು ನೀಗಿಸಲು ಮುಂದಾಗಿ. ಪ್ರಸ್ತುತ ಪರಿಸ್ಥಿತಿಯಲ್ಲಿ ಬಡವರ ಹಸಿವು ನೀಗಿಸುವುದು ಮುಖ್ಯ" ಎಂದಿದ್ದಾರೆ.
"ಕರ್ನಾಟಕದಾದ್ಯಂತ ಇರುವ ಇಂದಿರಾ ಕ್ಯಾಂಟೀನ್ ಹೆಸರನ್ನು ಕೂಡಲೇ ಅನ್ನಪೂಣೇಶ್ವರಿ ಕ್ಯಾಂಟೀನ್ ಎಂದು ಮರುನಾಮಕರಣ ಮಾಡಬೇಕು ಎಂದು ಸಿಎಂ ಅವರಲ್ಲಿ ಮನವಿ ಮಾಡುತ್ತೇವೆ. ಕನ್ನಡಿಗರು ಆಹಾರ ಸೇವಿಸುವಾಗ ಇಂದಿರಾ ಗಾಂಧಿ ಅವರ ಹೆಸರಿನ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನುಏಕೆ ನೆನಪಿಸಿಕೊಳ್ಳಬೇಕು?" ಎಂದು ನಿನ್ನೆ ಸಿ.ಟಿ ರವಿ ಅವರು ಟ್ವೀಟ್ ಮಾಡಿದ್ದರು.