ಬೆಂಗಳೂರು, ಆ 08 (DaijiworldNews/PY): "ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ಸಿಂಹಪಾಲು ಬಿಜೆಪಿ ಆಡಳಿತದ ಉತ್ತರ ಪ್ರದೇಶದ್ದು. ಮಹಿಳೆಯರ ಸುರಕ್ಷತೆಯ ಬಗ್ಗೆ ಧ್ವನಿ ಎತ್ತಬೇಕಿದೆ" ಎಂದು ರಾಜ್ಯ ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಬಿಜೆಪಿ ಸರ್ಕಾರ ಈ ಎರಡು ವರ್ಷದಲ್ಲಿ ಬರೀ ಅಧಿಕಾರ ಕೇಂದ್ರಿತ ಕಿತ್ತಾಟದಲ್ಲಿಯೇ ಕಳೆದಿದೆ. ಮುಂದೆಯೂ ಪ್ರತಿ ದಿನವೂ BJPvsBJP ಮುಂದುವರೆಯಲಿದೆ. ಜನಪರವಾಗಿ ಒಂದು ದಿನವೂ ಕೆಲಸ ಮಾಡದ ಬಿಜೆಪಿ ಇವರ ದುರಾಡಳಿತವನ್ನ ಪ್ರಶ್ನಿಸುವ ವಿಪಕ್ಷ ನಾಯಕರನ್ನ ನಿಂದಿಸುವ ಬದಲು ಉಳಿದ ಸ್ವಲ್ಪ ಸಮಯದಲ್ಲಿಯಾದರೂ ಜನರಿಗಾಗಿ ಕೆಲಸ ಮಾಡಲಿ ಎಂದು ಲೇವಡಿ" ಮಾಡಿದೆ.
"ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ಸಿಂಹಪಾಲು ಬಿಜೆಪಿ ಆಡಳಿತದ ಉತ್ತರ ಪ್ರದೇಶದ್ದು. ಮಹಿಳೆಯರ ಸುರಕ್ಷತೆಯ ಬಗ್ಗೆ ಚಿಂತಿಸದ ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರ ಸರ್ಕಾರಗಳು ಅತ್ಯಾಚಾರ ಆರೋಪಿಗಳ ಪರವಾಗಿ ನಿಲ್ಲುವಂತಹ ಕ್ರಮ ಕೈಗೊಂಡಿವೆ. ಮಹಿಳೆಯರ ಸುರಕ್ಷತೆಯ ಬಗ್ಗೆ ಧ್ವನಿ ಎತ್ತಬೇಕಿದೆ" ಎಂದು ಆಗ್ರಹಿಸಿದೆ.
"ಬಿಎಸ್ವೈ ಅವರನ್ನು ಐಟಿ, ಈಡಿ, ಸಿಬಿಐಗಳ ಬೆದರಿಕೆಯೊಡ್ಡಿ ರಾಜೀನಾಮೆ ಕೊಡಿಸಿದೆ ಬಿಜೆಪಿ. ಪುತ್ರ ಬಿ ವೈ ವಿಜಯೇಂದ್ರರನ್ನು ಜೈಲಿಗೆ ಕಳಿಸುತ್ತೇವೆ ಎಂದೂ ಸಹ ಬೆದರಿಸಲಾಗಿದೆ. ಕಣ್ಣೀರಿಟ್ಟ ಬಿಎಸ್ವೈ ಅವರೂ ಸಹ ರಾಜ್ಯದಲ್ಲಿ ಬಿಜೆಪಿಯನ್ನು ನಿರ್ನಾಮ ಮಾಡುವ ಬೆದರಿಕೆಯೊಡ್ಡಿ ಹೈಕಮಾಂಡ್ನ್ನು ಮಣಿಸಿದ್ದಾರೆ" ಎಂಬ ಸುದ್ದಿ ಇದೆ ಎಂದಿದೆ.